Belagavi NewsBelgaum News

*ಬೆಳವಟ್ಟಿ: ಅಂಬೇಡ್ಕರ್ ಭವನ, ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಬೆಳವಟ್ಟಿ ಗ್ರಾಮದಲ್ಲಿ ಸುಮಾರು 25 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಉಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ನಾಗರಿಕರು ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾನೇಶ್ವರ್ ಚೌಗುಲೆ, ಉಪಾಧ್ಯಕ್ಷರಾದ ಮಯಾರಿ ಅರಗೊಡೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಾದೇವಿ ಪರಶುರಾಮ ಮೆದಾರ್, ಮುಖಂಡರಾದ ಮಧು ನಲವಡೆ, ನಿಶಾ ಚಂದಿಲಕರ್, ರಮೇಶ ಕಾಂಬಳೆ, ರಾಜು ಕಾಂಬಳೆ ಉಪಸ್ಥಿತರಿದ್ದರು.

ನಂತರ, ಬೆಳವಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 21.64 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 1 ಹೆಚ್ಚುವರಿ ಕೊಠಡಿಯ ಕಾಮಗಾರಿಗೆ ಸಹ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು.

Home add -Advt

ಈ ವೇಳೆ ಡಿ.ಡಿ.ಗೊರವ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಡಿ.ಎನ್.ಚೌಗುಲೆ, ಉಪಾಧ್ಯಕ್ಷರಾದ ಮಯೂರಿ ಹರಗೊಡೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾದೇವಿ ಮೇದಾರ್,ಉಪಾಧ್ಯಕ್ಷರಾದ ಬಾಬುರಾವ್ ಪಾಟೀಲ, ಮಧು ನಲವಡೆ, ನಾರಾಯಣ ನಲವಡೆ, ಆರ್.ಬಿ.ದೇಸಾಯಿ ಇದ್ದರು.

Related Articles

Back to top button