Belagavi NewsBelgaum NewsKannada NewsKarnataka News

*ಗ್ರಾಮೀಣ ಕ್ಷೇತ್ರದ ವಿವಿಧೆಡೆ ರಸ್ತೆ ಕಾಮಗಾರಿಗೆ ಪೂಜೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಮನವಾಡಿ ಹಾಗೂ ಕುಟ್ಟಲವಾಡಿ ಗ್ರಾಮಗಳ ಒಳಾಂಗಣ ರಸ್ತೆಗಳ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸೇರಿ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ತಲಾ 81 ಲಕ್ಷ ರೂ.ಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ನಿಗದಿತ ಸಮಯದಲ್ಲಿ ರಸ್ತೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.

ಬಾಮನಾಡಿಯ ಪೂಜೆಯ ವೇಳೆ ನಿಲೇಶ್ ಗಾವಡೆ, ಮಲ್ಲಪ್ಪ ವಾಘಮೊಡೆ, ಮಾರುತಿ ಗಾವಡೆ, ಪುಂಡಲೀಕ್ ಪಾಯನಾಚೆ, ಸಂಜು ಹಣಬರ, ಮಹಾದೇವ್ ಪಾಯನಾಚೆ, ಭರಮಾ ಪಾಟೀಲ, ಅಪ್ಪಾಜಿ ಬೋಕಡೆ, ಸಹದೇವ್ ಗಾವಡೆ, ನಾಗಪ್ಪ ಇಟಗಿ, ಬಸವಂತ ಮಾಸ್ತಮರಡಿ, ಜ್ಯೋತಿಬಾ ಪಾಯನಾಚೆ ಮುಂತಾದವರು ಉಪಸ್ಥಿತರಿದ್ದರು.

Home add -Advt

ಕುಟ್ಟಲವಾಡಿಯಲ್ಲಿ ಪೂಜೆಯ ಸಂದರ್ಭದಲ್ಲಿ ಸುಧೀರ್ ದೇಸಾಯಿ, ಮಾರುತಿ ದೊಡ್ಡಲಕ್ಕಪ್ಪಗೋಳ, ರಾಜು ದೇಸಾಯಿ, ರೋಹಿತ್ ನಾಯ್ಕ್, ಸಿದ್ದರಾಯಿ ಬಡಕನ್ನವರ, ಪರಶು ನಾಯ್ಕ್, ಧರ್ಮೆಂದ್ರ ದೇಸಾಯಿ, ಭರ್ಮಾ ಕಣಬರಕರ್ ಪ್ರಕಾಶ ಹೊಸಮನಿ ಇದ್ದರು.

Related Articles

Back to top button