Kannada NewsKarnataka NewsLatestPolitics
*BREAKING: ಮುಡಾ ಹಗರಣ: ಬಿ ರಿಪೋರ್ಟ್ ಕುರಿತು ವಿಚಾರಣೆ ಮುಂದೂಡಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮೂಡಾ ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬಿ ರಿಪೋರ್ಟ್ ಕುರಿತ ವಿಚಾರಣೆಯನ್ನು ಮತ್ತೆ ಮುಂದೂಡಿದೆ.
ಇಂದು ನಡೆದ ವಿಚಾರಣೆ ವೇಳೆ ಲೋಕಾಯುಕ್ತ ಪೊಲೀಸರು ತನಿಖೆಯ ಸ್ಥಿತಿಗತಿ ಬಗ್ಗೆ ಕೋರ್ಟ್ ಗೆ ವರದಿ ಸಲ್ಲಿಸಿದರು. ಈ ವೇಳೆ ದೂರುದಾದ ಸ್ನೇಹಮಯಿ ಕೃಷ್ಣ, ಅನಗತ್ಯವಾಗಿ ತನಿಖೆ ವಿಳಂಬ ಮಾಡುತ್ತಿದ್ದಾರೆ ಎಣ್ದು ಆರೋಪಿಸಿದರು. ಇದಕ್ಕೆ ಎಸ್ ಪಿಪಿ ಕೇಸ್ ಡೈರಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುತ್ತೇವೆ ಎಂದರು. ಈ ವೇಳೆ ಕೋರ್ಟ್, ಕೇಸ್ ಡೈರಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತು.
ಅಲ್ಲದೇ ಇಡಿ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣಗೆ ಬಿ ರಿಪೋರ್ಟ್ ಬಗ್ಗೆ ಹೆಚ್ಚುವರಿ ವಾದಮಂಡನೆಗಳಿದ್ದರೆ ಸಲ್ಲಿಸುವಂತೆ ಸೂಚಿಸಿದೆ. ಬಿ ರಿಪೋರ್ಟ್ ಕುರಿತ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿ ಆದೇಶ ಹೊರಡಿಸಿತು.




