Belagavi NewsBelgaum News

*ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಹುತಾತ್ಮರಾದ ಮೂಡಲಗಿ ಮೂಲದ ಯೋಧ*

ಪ್ರಗತಿವಾಹಿನಿ ಸುದ್ದಿ: ಮೂಡಲಗಿ: ಕಲ್ಲೋಳಿ ಪಟ್ಟಣದ ವೀರ ಯೋಧ ಪ್ರವೀಣ್ ಸುಭಾಸ್ ಖಾನಗೌಡ್ರ (24) ಅವರು ಬುಧವಾರ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಿಧನರಾಗಿದ್ದಾರೆ.

ನಮ್ಮ ಹೆಮ್ಮೆಯ ವೀರ ಯೋಧ ದೇಶದ ರಕ್ಷಣೆಗಾಗಿ ಅವರು ಸಲ್ಲಿಸಿದ ಸೇವೆ ಎಂದೆಂದಿಗೂ ಅಮರ.

ಕಲ್ಲೋಳಿ ಪಟ್ಟಣದಲ್ಲಿ 2000 ನೇ ಇಸ್ವಿಯಲ್ಲಿ ಜನಿಸಿದ ಪ್ರವೀಣ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕಲ್ಲೋಳಿ, ಖನಗಾಂವ ಗ್ರಾಮದಲ್ಲಿ ಮುಗಿಸಿ,ಪಿಯುಸಿ,ಪದವಿ ಶಿಕ್ಷಣವನ್ನು ಗೋಕಾಕದಲ್ಲಿ ಮುಗಿಸಿದರು.

ಫೇ 12,2020 ರಲ್ಲಿ ಭಾರತೀಯ ನೌಕಾಪಡೆಗೆ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾದ ಪ್ರವೀಣ ಕೇರಳದ ಕೊಚ್ಚಿಯಲ್ಲಿ 1 ವರ್ಷ ತರಬೇತಿ ಮುಗಿಸಿದರು ನಂತರ ಅಂಡಮಾನ 3 ವರ್ಷ ಹಾಗೂ ಚೆನೈನಲ್ಲಿ 1 ವರ್ಷ ಸೇವೆ,ಭಾರತೀಯ ನೌಕಾಪಡೆಯಲ್ಲಿ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಈ ವೇಳೆ ವಿಧಿವಸರಾಗಿದ್ದಾರೆ.

ಅಗಲಿದ ವೀರಯೋಧ ಪ್ರವೀಣ ಅವರು ತಂದೆ,ತಾಯಿ,ಸಹೋದರ ಸೇರಿದಂತೆ ಅನೇಕರನ್ನು ಬಿಟ್ಟು ಅಗಲಿದ್ದಾರೆ

ಅಗಲಿದ ವೀರ ಯೋಧನ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಕುಟುಂಬಕ್ಕೆ ಭಗವಂತ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.

ಕಲ್ಲೋಳಿ ಪಟ್ಟಣದ ಪಂಚಾಯತ ಆವರ್ಣದ ಹತ್ತಿರ ಸಕಲ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ಬೆಳಿಗ್ಗೆ 11-00 ಅಂತ್ಯಕ್ರಿಯೆ ನಡೆಯಲಿದ್ದು.ಅದಕಿಂತ ಮುಂಚೆ ಸಂಗನಕೇರಿ ಗ್ರಾಮದಿಂದ ಕಲ್ಲೋಳಿ ಪಟ್ಟಣದವರೆಗೆ ಯೋಧನ ಗೌರವ ನಮನ ಯಾತ್ರೆ ನಡೆಯಲಿದೆ.

ಸಂತಾಪ: ಅಗಲಿದ ವೀರ ಯೋಧ ಪ್ರವೀಣ ಖಾನಗೌಡ್ರ ನಿಧನಕ್ಕೆ ಸಂಸದರಾದ ಈರಣ್ಣ ಕಡಾಡಿ,ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ,ಸಹಕಾರಿಯ ಧುರೀಣ ಬಿ.ಬಿ.ಬೆಳಕೂಡ ಸೇರಿದಂತೆ ಅನೇಕರು ಸಂತಾಪ ಸೂಚಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button