Latest

ದೇಶದಲ್ಲೇ ಅತಿ ದುಬಾರಿ ಕಾರ್ ಖರೀದಿಸಿದ ಮುಖೇಶ್ ಅಂಬಾನಿ; ದೇಶದಲ್ಲಿ ಕಾರ್ ಒಂದಕ್ಕೆ ಭರಿಸಲಾದ ಅತೀ ಹೆಚ್ಚಿನ ಮೊತ್ತದ ರಸ್ತೆ ತೆರಿಗೆ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಆಗರ್ಭ ಶ್ರೀಮಂತ, ರಿಲಾಯೆನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ, ಪ್ರಸ್ತುತ ಖರೀದಿಸಿರುವ ಕಾರು ಈವರೆಗೆ ದೇಶದಲೇ ಅತೀ ದುಬಾರಿ ಕಾರೆಂದು ಗುರುತಿಸಲಾಗಿದೆ.

ಮುಖೇಶ್ ಅಂಬಾನಿ ಇತ್ತೀಚೆಗೆ ರೋಲ್ಸ್ ರಾಯ್ಸ್ ಹ್ಯಾಚ್ ಬ್ಯಾಕ್ ಕಾರೊಂದನ್ನು ಖರೀದಿಸಿದ್ದು ಇದರ ಬೆಲೆ ಬರೋಬ್ಬರಿ 13.14 ಕೋಟಿ ರೂ. ಆಗಿದೆ. ಇದು ಭಾರತದ ಇತಿಹಾದಲ್ಲೇ ಅತ್ಯಂತ ದುಬಾರಿ ಕಾರು ಎನ್ನಲಾಗಿದೆ. ರೋಲ್ಸ್ ರಾಯ್ಸ್ ಕುಲಿನನ್ ಮಾದರಿಯ ಒಎಟ್ರೋಲ್ ಇಂಜಿನ್ ಹೊಂದಿದ ಈ ಕಾರು ಜ.31ರಂದು ಮುಂಬೈನ ದಕ್ಷಿಣ ಮುಂಬೈನ ಆರ್‌ಟಿಒ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ.

Home add -Advt

ವಿಐಪಿ ನಂಬರ್ (0001) ತೆಗೆದುಕೊಳ್ಳಲು 12 ಲಕ್ಷ ರೂ. ಪಾವತಿಸಲಾಗಿದೆ.

12 ಸಿಲಿಂಡರ್

12 ಸಿಲಿಂಡರ್‌ನ ಈ ಕಾರು 2.5 ಟನ್ ತೂಕದ್ದಾಗಿದೆ. 564 ಬಿಎಚ್‌ಪಿ ಇಂಜಿನ್ ಸಾಮರ್ಥ್ಯ ಹೊಂದಿದೆ. ಕಾರಿನ ನೋಂದಣಿ ತೆರಿಗೆಯೇ 20 ಲಕ್ಷ ರೂ. ಆಗಿದೆ. ಅಲ್ಲದೇ ರಸ್ತೆ ಸುರಕ್ಷತಾ ತೆರಿಗೆ 40 ಸಾವಿರ ರೂ. ಆಗಿದೆ. ಇದು ದೇಶದಲ್ಲಿ ಕಾರ್ ಒಂದಕ್ಕೆ ಭರಿಸಲಾದ ಅತೀ ಹೆಚ್ಚಿನ ಮೊತ್ತದ ರಸ್ತೆ ತೆರಿಗೆ ಎಂದು ಆರ್‌ಟಿಒ ಅಧಿಕಾರಿಗಳು ಹೇಳಿದ್ದಾರೆ.

ರೋಲ್ಸ್ ರಾಯ್ಸ್ನ ಕುಲಿನನ್ ಮಾದರಿ ಕಾರು ಈಗಾಗಲೇ ಭಾರತದಲ್ಲಿ ಕೆಲ ಬಾಲಿವುಡ್ ಚಿತ್ರ ನಟರ ಬಳಿ ಇದೆ. 2018ರಲ್ಲಿ ಕುಲಿನನ್ ಕಾರನ್ನು ರೋಲ್ಸ್ ರಾಯ್ಸ್ ಭಾರತದಲ್ಲಿ ಲಾಂಚ್ ಮಾಡಿದೆ. ಆದರೆ ಆ ಮಾದರಿಯ ಕಾರು ಸುಮಾರು 6.50 ಕೋಟಿ ಬೆಲೆ ಬಾಳುತ್ತದೆ. ಪ್ರಸ್ತುತ ಮುಖೇಶ್ ಅಂಬಾನಿ ಖರೀದಿಸಿದ ಕಾರಿನಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ ಎಂದು ವರದಿಯಾಗಿದೆ.

ಪ್ರವಾಸಿ ವಿಮಾನ ಪತನ; 7 ಜನರು ದುರ್ಮರಣ

Related Articles

Back to top button