Latest

ಸ್ಟಂಪ್‌ಗೆ ಎಸೆಯಲು ಹೋದ ಬಾಲ್ ಕೋಹ್ಲಿಗೆ ಹಿಟ್: ಕ್ಷಮೆ ಕೇಳಿದ ಬೌಲರ್

ಪ್ರಗತಿವಾಹಿನಿ ಸುದ್ದಿ; ಪುಣಾ: ಸ್ಟಂಪ್‌ಗೆ ಹಿಟ್ ಮಾಡಲು ಹೋದ ಚೆಂಡು ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೋಹ್ಲಿಗೆ ತಗುಲಿದ್ದು ಬೌಲರ್ ಮುಖೇಶ್ ಚೌದರಿ ಕೋಹ್ಲಿ ಕ್ಷಮೆ ಯಾಚಿಸಿದ ಪ್ರಸಂಗ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಬುಧವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಸಂಭವಿಸಿದೆ.

ಹೊಸ ಚೆಂಡಿನೊಂದಿಗೆ ಮೊದಲನೇ ಓವರನ್ನು ಸಿಎಸ್‌ಕೆ ವೇಗಿ ಮುಖೇಶ್ ಚೌದರಿ ಬಾಲ್ ಮಾಡುತ್ತಿದ್ದರು. ಓವರ್‌ನ ಕೊನೇಯ ಎಸೆತದಲ್ಲಿ ಕೋಹ್ಲಿ ಬಾರಿಸಿದ ಚೆಂಡು ಮುಖೇಶ್ ಕೈ ಸೇರಿತ್ತು. ಈ ವೇಳೆ ಕೋಹ್ಲಿ ರನ್ ತೆಗೆಯಲು ಮುಂದಾದರು. ಆದರೆ ಚೆಂಡು ಮುಖೇಶ್ ಕೈ ಸೇರಿದ್ದು ಕಂಡು ವಾಪಸ್ ಡೈವ್ ಮಾಡುತ್ತಿದ್ದ ವೇಳೆ ಮುಖೇಶ್ ಸ್ಟಂಪ್‌ಗೆ ಡೈರೆಕ್ಟ್ ಹಿಟ್ ಮಾಡಿದ್ದಾರೆ. ಆದರೆ ಚೆಂಡು ಕೋಹ್ಲಿ ಅವರ ಎಡಗಾಲಿಗೆ ಅಪ್ಪಳಿಸಿದೆ.

ಪ್ರಮಾದವಾಗಿದ್ದು ಕಂಡು ಅರೆ ಕ್ಷಣ ಬೆಚ್ಚಿದ ಮುಖೇಶ್ ಎರಡೂ ಕೈ ಎತ್ತಿ ಕೋಹ್ಲಿಯ ಕ್ಷಮೆ ಯಾಚಿಸಿದ್ದಾರೆ. ಆದರೆ ಕೋಹ್ಲಿ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಮುಖೇಶ್ ಎಡೆಗೆ ನಕ್ಕಿದ್ದು ಪ್ರಕರಣ ಸುಖಾಂತ್ಯ ಕಂಡಿತು.

ಐಪಿಎಲ್ ನಲ್ಲಿ ಒಂದೇ ತಂಡಕ್ಕೆ ಅತೀ ಹೆಚ್ಚು ಪಂದ್ಯ ಆಡಿದ ಆಟಗಾರರು ಯಾರು ಗೊತ್ತೆ ?

Home add -Advt

Related Articles

Back to top button