ಪ್ರಗತಿವಾಹಿನಿ ಸುದ್ದಿ; ಮುಂಬೈ: ದಾಂಪತ್ಯ ಜೀವನದ ಕಲಹದಿಂದ ಪತಿಯಿಂದ ದೂರವಾದ ಉದ್ಯಮಿ ಪತ್ನಿಗೆ ಇದೀಗ ಕೋರ್ಟ್ ಪ್ರತಿ ತಿಂಗಳು 1.5 ಲಕ್ಷ ರೂ ನೀಡುವಂತೆ ಸೂಚನೆ ನೀಡಿದೆ.
ಉದ್ಯಮಿ ಪತಿಯ ದೈಹಿಕ ಹಿಂಸೆಯಿಂದ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದ ಪತ್ನಿ ಕೆಲಸ ಕಳೆದುಕೊಂಡು ಇದೀಗ ಕೋರ್ಟ್ ಮೆಟ್ಟಿಲೇರಿದ್ದು, ಪತಿಯಿಂದ ತನಗೆ ಸೂಕ್ತ ಪರಿಹಾರ ನೀಡುವಂತೆ ಕೋರಿದ್ದಳು. ಪತಿಯ ಹಿಂಸೆ, ಅನಾರೋಗ್ಯದಿಂದಾಗಿ ತಾನು ಪೈಲಟ್ ಉದ್ಯೋಗ ಬಿಡುವ ಸ್ಥಿತಿ ಬಂತು. ಪತಿಯನ್ನು ಬಿಟ್ಟು ಅಪ್ಪನ ಆಸರೆಯಲ್ಲಿ ಬದುಕುತ್ತಿದ್ದೇನೆ. ತನ್ನ ಪತಿಗೆ ವಾರ್ಷಿಕ 18 ಕೋಟಿ ಆದಾಯವಿದ್ದು ತನಗೆ ಸೂಕ್ತ ಪರಿಹಾರ ಕೊಡಿಸುವಂತೆ ಕೇಳಿದ್ದಾಳೆ.
ವಿಚಾರಣೆ ನಡೆಸಿದ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಉದ್ಯಮಿ ಪತಿಗೆ ಪ್ರತಿ ತಿಂಗಳು ಪತ್ನಿಗೆ 1.5 ಲಕ್ಷ ರೂ ನಿರ್ವಹಣಾ ವೆಚ್ಚ ನೀಡಬೇಕು. ಪತ್ನಿಯನ್ನು ಸಾಕುವುದು ಪತಿಯ ಕರ್ತವ್ಯ. ಆಕೆಯ ದಿನನಿತ್ಯದ ಖರ್ಚುವೆಚ್ಚಗಳನ್ನು ಪತಿಯೇ ಭರಿಸಬೇಕು ಎಂದು ಸೂಚಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ