Latest

ಪೊಲೀಸರು ಹಿಡಿದ ಈ ಮಾದಕ ವಸ್ತುವಿನ ಬೆಲೆ ಬೆಚ್ಚಿಬೀಳಿಸುವಂತಿದೆ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಮುಂಬೈನ ಬಾಂದ್ರಾ ಪೊಲೀಸರು 37 ವರ್ಷದ ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ 215 ಗ್ರಾಂ ತೂಕದ ಮಾರ್ಫಿನ್ ಎಂಬ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ಈ ಮಾರ್ಫಿನ್ ಮಾದಕ ವಸ್ತುವಿನ ಬೆಲೆ ಪ್ರತಿ ಗ್ರಾಂಗೆ 20 ಸಾವಿರ ರೂ ! ಬರೀ 215 ಗ್ರಾಂನ ಮೌಲ್ಯ ಬರೋಬ್ಬರಿ 43 ಲಕ್ಷ ರೂ. ಆಗಿದೆ.

ಬಂಧಿಸಲ್ಪಟ್ಟ ವ್ಯಕ್ತಿ ಮುಂಬೈನಲ್ಲಿ ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ 17 ಪ್ರಕರಣಗಳಲ್ಲಿ ಬೇಕಾಗಿದ್ದ ಖತರ್ನಾಕ್ ಆರೋಪಿಯಾಗಿದ್ದು, ಈತನ ವಿರುದ್ಧ ನಾರ್ಕೋಟಿಕ್ ಡ್ರಗ್ಸ್, ಮತ್ತು ಸೈಕೋಟ್ರಾಫಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಆಗಸದಿಂದ ನೇರವಾಗಿ ಬೀಚ್ ಮೇಲೆ ಇಳಿಯಲು ಪ್ರಯತ್ನಿಸಿದ ಹೆಲಿಕಾಪ್ಟರ್; ಬೆಚ್ಚಿಬಿದ್ದ ಕಾರವಾರ ಜನತೆ

Home add -Advt

https://pragati.taskdun.com/latest/helicoptertried-to-land-in-karwar-beach/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button