Belagavi NewsBelgaum NewsKannada NewsKarnataka News

ಚನ್ನರಾಜ ಹಟ್ಟಿಹೊಳಿಗೆ ಮುರಗೋಡ ಮುಕುಟ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ,​ ಮುರಗೋಡ : ಮುರಗೋಡ ಮಹಾಂತ ಮಠದ ಜಾತ್ರಾ ಮಹೋತ್ಸವದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಸಂಜೆ ಮಠಕ್ಕೆ ಭೇಟಿ ನೀಡಿದ್ದರು. ಮಹಾಂತ ಅಜ್ಜನವರ ಪ್ರತಿಮೆಗೆ ಭಕ್ತಿಪೂರ್ವಕ ನಮ‌ನ ಸಲ್ಲಿಸಿ, ಶ್ರೀ ಮ.ನಿ.ಪ್ರ.ಸ್ವ ನೀಲಕಂಠ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

ಇದೇ ಸಮಯದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರ ಪಟ್ಟಿಯಲ್ಲಿ “ಮುರಗೋಡ ಮುಕುಟ” ಪ್ರಶಸ್ತಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಯ್ಕೆಯಾಗಿದ್ದು, ​ಅ​ವರ ಪರವಾಗಿ​ ಲಕ್ಷ್ಮೀ ಹೆಬ್ಬಾಳಕರ್ ಪ್ರಶಸ್ತಿ ಸ್ವೀಕರಿಸಿ​ದ​ರು.

​  ಬೈಲಹೊಂಗಲ ಶಾಸಕ​ ಮಹಾಂತೇಶ ಕೌಜಲಗಿ, ಯುವ ಕಾಂಗ್ರೆಸ್ ಮುಖಂಡ ​ಮ​ೃಣಾಲ ಹೆಬ್ಬಾಳಕರ್, ಜಿಲ್ಲಾ ಕಾಂಗ್ರೆಸ್ ಮುಖಂಡ ಮಹಾಂತೇಶ ಮತ್ತಿಕೊಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ, ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button