Latest

ವಾಪಸ್ ಜೈಲಿಗೆ ಕಳುಹಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಖೈದಿ ! ಅಚ್ಚರಿಯ ವಿದ್ಯಮಾನಕ್ಕೆ ಕಾರಣ ಗೊತ್ತೆ ?

ಪ್ರಗತಿವಾಹಿನಿ ಸುದ್ದಿ, ಚೆನ್ನೈ –  ಜೈಲಿನಿಂದ ಹೊರ ಬರಲು ಖೈದಿಗಳು ನಾನಾ ಪ್ರಯತ್ನ ನಡೆಸುತ್ತಿದ್ದರೆ, ಇದಕ್ಕೆ ವಿರುದ್ಧವಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಖೈದಿ ತನ್ನನ್ನು ವಾಪಸ್ ಜೈಲಿಗೆ ಕಳುಹಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಅಚ್ಚರಿಯ ವಿದ್ಯಮಾನವೊಂದು ತಮಿಳುನಾಡಿನ ಉದಗಮಂಡಲಂ ಜಿಲ್ಲೆಯಲ್ಲಿ ನಡೆದಿದೆ.

ಕೊಡನಾಡು ಎಸ್ಟೇಟ್ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಕೊಲೆ ಪ್ರಕರಣ ದಾಖಲಾಗಿತ್ತು. ಕೆಲ ದಿನಗಳ ಕಾಲ ಜೈಲಲ್ಲಿದ್ದ ಈತನಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ಹೊರಗಡೆ ತನಗೆ ಉದ್ಯೋಗ ಮತ್ತು ಉಳಿಯಲು ಮನೆ ಸಿಗುತ್ತಿಲ್ಲ ಹಾಗಾಗಿ ತನ್ನುನ್ನು ವಾಪಸ್ ಜೈಲಿಗೆ ಕಳುಹಿಸಿ ಎಂದು ಆರೋಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ಕ್ರಿಮಿನಲ್ ಆರೋಪದ ಹಿನ್ನೆಲೆ

ತನಗೆ ವಾಸಕ್ಕೆ ಮನೆ ಮತ್ತು ಉದ್ಯೋಗ ಸಿಗದೇ ಇರಲು ತನಗೆ ಇರುವ ಕ್ರಿಮಿನಲ್ ಆರೋಪ ಕಾರಣವಾಗಿದೆ. ಅಲ್ಲದೇ ತನ್ನ ಆರೋಗ್ಯವೂ ಹದಗೆಟ್ಟಿದ್ದು ಅಕ್ಷರಶಃ ಕಂಗಾಲಾಗಿದ್ದೇನೆ. ನನಗೆ ಆಶ್ರಯ ನೀಡುವವರು ಯಾರೂ ಇಲ್ಲದ ಕಾರಣ ಜೈಲಿಗೆ ವಾಪಸ್ ಕಳಿಸಿ ಎಂದು ಆರೋಪಿ ಕೋರಿದ್ದಾನೆ. ಈತನ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಫೆ.೩ರಂದು (ಗುರುವಾರ) ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜಯ ಲಲಿತಾ ಅವರಿಗೆ ಸೇರಿತ್ತು

ಕೊಡನಾಡು ಎಸ್ಟೇಟ್ ಮೊದಲು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸೇರಿದ್ದಾಗಿತ್ತು. ಅವರ ನಿಧನದ ಬಳಿಕ ನಡೆದ ಘಟನೆಯಲ್ಲಿ ಆರೋಪಿ ಎಸ್ಟೇಟ್ ಸೆಕ್ಯುರಿಟಿ ಗಾರ್ಡ್‌ನನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ.

ಮುರುಗೇಶ ನಿರಾಣಿ ದಾನ ಮಾಡಿದ ವಸ್ತುಗಳನ್ನು ಅವರಿಗೇ ವಾಪಸ್ ಮಾಡುತ್ತೇವೆ: ಜಯ ಮೃತ್ಯುಂಜಯ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button