
ಪ್ರಗತಿವಾಹಿನಿ ಸುದ್ದಿ, ಗೋಕಾಕ : ಗೋಕಾಕದಲ್ಲಿ ಭಾನುವಾರ ಸಂಜೆ ವ್ಯಕ್ತಿಯೋರ್ವನ ಕೊಲೆಗೈಯ್ಯಲಾಗಿದೆ.
ಗೋಕಾಕ ಆದಿಜಾಂಬವ ನಗರದಲ್ಲಿ ಎಸ್‌ಟಿ ಸಮುದಾಯಕ್ಕೆ ಸೇರಿದ ಸಂತೋಷ್ ಎಂಬುವವರ ಕೊಲೆ ನಡೆದಿದ್ದು, ಆರೋಪಿ ಎಸ್‌ಸಿ ಸಮುದಾಯಕ್ಕೆ ಸೇರಿದವನು.
ಹತ್ಯೆಯ ಘಟನೆಯ ನಂತರ ಎಸ್ಸಿ ಸಮುದಾಯಕ್ಕೆ ಸೇರಿದ ಸುಮಾರು 100 ಜನರು ಹೋಗಿ ಆರೋಪಿಯ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈಗ ಪಟ್ಟಣವು ಸಂಪೂರ್ಣವಾಗಿ ಶಾಂತಿಯುತವಾಗಿದೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಗೋಕಾಕ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.