ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ಬಿ.ಎಸ್.ಯಡಿಯೂರಪ್ಪ. ಅವರ ರಾಜೀನಾಮೆಯಿಂದ ತುಂಬಾ ನೋವಾಗಿದೆ. ಆದರೆ ಈಗ ರಾಜ್ಯಕ್ಕೆ ನೂತನ ನಾಯಕನ ಆಯ್ಕೆ ಸಂದರ್ಭ ಬಂದಿದೆ. ಯಾರು ಸೂಕ್ತ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಿರಾಣಿ, ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ನೀಡಲ್ಲ. ಆದರೂ ಯಡಿಯೂರಪ್ಪನವರೇ ಹೇಳಿದಂತೆ ಅವರಿಗೆ ಎರಡು ವರ್ಷ ಕಾಲ ಸಿಎಂ ಆಗಿ ಆಡಳಿತ ನಡೆಸಲು ಅವಕಾಶ ನೀಡಿದ್ದಾರೆ. ಹಿರಿಯರು ಯುವಕರಿಗೆ ಅಧಿಕಾರ ಬಿಟ್ಟುಕೊಡುವುದು ಬಿಜೆಪಿ ಸಿದ್ಧಾಂತ. ಹಾಗಾಗಿ ಈಗ ನೂತನ ನಾಯಕನ ಆಯ್ಕೆ ಸಂದರ್ಭ ಬಂದಿದೆ ಎಂದು ಹೇಳಿದರು.
ಬಿಜೆಪಿಯಲ್ಲಿ 120 ಶಾಸಕರು ಕೂಡ ಸಿಎಂ ಆಗಲು ಸಮರ್ಥರಿದ್ದಾರೆ. ಮುಂದಿನ ಸಿಎಂ ಯಾರಾಗಬೇಕು? ಯಾರು ಸೂಕ್ತ ನಾಯಕ ಎಂಬುದನ್ನು ಹೈಕಮಾಂಡ್ ಹಾಗೂ ಸಂಘ ಪರಿವಾರ ನಿರ್ಧರಿಸುತ್ತದೆ. ಸಿಎಂ ಸ್ಥಾನಕ್ಕಾಗಿ ನಾನು ಯಾವುದೇ ಲಾಬಿ ಮಾಡಿಲ್ಲ. ಅಧಿಕಾರಕ್ಕಾಗಿ ಲಾಬಿ ಮಾಡುವ ಪರಿಪಾಠ ನನ್ನದಲ್ಲ ಕೆಲವರು ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹೆಸರು ಹೇಳಿದ್ದಾರೆ. ಅದು ನನ್ನ ಮೇಲಿನ ಅಭಿಮಾನವಷ್ಟೆ. ಯಾರು ಸೂಕ್ತ ನಾಯಕ ಎಂಬುದನ್ನು ವರಿಷ್ಠರು ಆಯ್ಕೆ ಮಾಡುತ್ತಾರೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದರು.
ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ; ಇಂದೇ ನೂತನ ಸಿಎಂ ಆಯ್ಕೆ ಅಂತಿಮ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ