Latest

ಮುರುಘಾಮಠದಲ್ಲಿ 4 ವರ್ಷದ ಅಪರಿಚಿತ ಹೆಣ್ಣು ಮಗು ಪತ್ತೆ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ; ಮುರುಘಾಶ್ರೀಗಳ ವಿರುದ್ಧ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸ್ವಾಮೀಜಿಗಳ ಪೀಠತ್ಯಾಗಕ್ಕೆ ಒತ್ತಡಗಳು ಹೆಚ್ಚುತ್ತಿವೆ ಈ ಎಲ್ಲಾ ಬೆಳವಣಿಗಗಳ ನಡುವೆ ಮುರುಘಾ ಮಠದ ಆವರಣದಲ್ಲಿರುವ ವಸತಿ ಶಾಲೆಯಲ್ಲಿ ನಾಲ್ಕು ವರ್ಷದ ಅಪರಿಚಿತ ಹೆಣ್ಣು ಮಗುವೊಂದು ಪತ್ತೆಯಾಗಿದೆ.

ನಾಲ್ಕು ವರ್ಷದ ಹೆಣ್ಣು ಮಗು ಇದಾಗಿದ್ದು, ಮಗುವಿಗೆ ಚಿಗುರು ಎಂದು ಹೆಸರಿಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಮಗು ಅಠದ ವಸತಿ ಶಾಲೆಯಲ್ಲಿಯೇ ಯಾರಿಗೂ ಗೊತ್ತಾಗದಂತೆ ಇರಿಸಲಾಗಿದೆ ಎನ್ನಲಾಗಿದೆ. ಮಗುವಿನ ಪೋಷಕರ ಬಗ್ಗೆ ಯಾವುದೇ ವಿವರಗಳೂ ಇಲ್ಲ. ಮುರುಘಾ ಮಠದ ವಸತಿ ಶಾಲೆಗೆ ಮಡಿಲು ಯೋಜನೆ ಅಧಿಕಾರಿಗಳು ದಿನವೂ ಭೇಟಿ ನೀಡುತ್ತಾರೆ. ಆದರೂ ನಾಲ್ಕು ವರ್ಷಗಳಿಂದ ಅಪರಿಚಿತ ಮಗುವಿನ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ಇಲ್ಲವೇ? ಎಂಬ ಪ್ರಶ್ನೆ ಮೂಡುತ್ತಿದೆ.

Related Articles

ಮಗುವಿನ ಪೋಷಕರ ಪತ್ತೆಗಾಗಿ ಪತ್ರಿಕೆಯಲ್ಲಿ ಜಾಹಿರಾತು ಹೊರಡಿಸಲಾಗಿದೆ. ಇನ್ನೊಂದೆಡೆ ಮುರುಘಾ ಮಠದಲ್ಲಿ ಹಲವು ಮಕ್ಕಳನ್ನು ಅನಧಿಕೃತವಾಗಿ ಇರಿಸಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ದೂರು ನೀದಲಾಗಿದೆ.

ಕೇಸ್ ದಾಖಲಾಗುತ್ತಿದ್ದಂತೆ ವಸತಿ ಶಾಲೆಯಲ್ಲಿದ್ದ ಮಕ್ಕಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

Home add -Advt

ಬೆಳಗಾವಿಯಲ್ಲಿ ನಿರಾಣಿ ಸಮೂಹದ ವಿಶಾಲ ಸೌಹರ್ದ ಸಹಕಾರಿ ಶಾಖೆ ನಾಳೆ ಉದ್ಘಾಟನೆ ; ಸಿಎಂ, ಕೇಂದ್ರ ಸಚಿವರು ಭಾಗಿ

https://pragati.taskdun.com/belgaum-news/inauguration-of-vishal-souharda-cooperative-branch-in-belgaum-tomorrow-cm-union-minister-participated/

Related Articles

Back to top button