ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಮುರುಘಾಮಠದ ವಸತಿ ಶಾಲೆಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗು ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನಾಲ್ಕುವರೆ ವರ್ಷದ ಹಿಂದೆ ಪತ್ತೆಯಾಗಿದ್ದ ಮಗುವನ್ನು ನಾನೇ ಮಠಕ್ಕೆ ನೀಡಿದ್ದೆ ಎಂದು ಫೈರೋಜಾ ಎಂಬ ಮಹಿಳೆ ತಿಳಿಸಿದ್ದಾರೆ.
ಮುರುಘಾ ಮಠದ ಬಳಿ ಟೀ ಅಂಗಡಿ ನಡೆಸುತ್ತಿರುವ ಫೈರೋಜಾ ಎಂಬ ಮಹಿಳೆ ಮಠದ ಕಾಂಪೌಂಡ್ ಮುಂದಿನ ರಸ್ತೆಯಲ್ಲಿ ನಾಲ್ಕುವರೆ ವರ್ಷದ ಹಿಂದೆ ಹೆಣ್ಣುಮಗುವೊಂದು ಪತ್ತೆಯಾಗಿತ್ತು. ಸ್ಥಳೀಯರ ಮಾಹಿತಿಯಂತೆ ನಾನೂ ಸ್ಥಳಕ್ಕೆ ಹೋಗಿ ನೋಡಿದ್ದೆ. ಆಗ ಮಗುವಿನ ಬಳಿ ಪತ್ರವೊಂದಿತ್ತು. ಅದರಲ್ಲಿ ಮಗುವನ್ನು ಮಠಕ್ಕೆ ಕೊಡುವಂತೆ ಬರೆದಿತ್ತು.
ಪುಟ್ಟ ಮಗುವಿನ ಬಟ್ಟೆಗಳಿಗೆ ಇರುವೆಗಳು ಸೇರಿಕೊಂಡಿದ್ದವು. ಮಗುವನ್ನು ಕರೆತಂದು ಸ್ನಾನ ಮಾಡಿಸಿ ಹಾಲುಣಿಸಿದ್ದೆ. ಅಷ್ಟರಲ್ಲಿ ಮಠದ ಭದ್ರತಾ ಸಿಬ್ಬಂದಿ ಮಗು ಬಳಿ ಇದ್ದ ಪತ್ರವನ್ನು ಮಠದ ಸ್ವಾಮೀಜಿಗಳಿಗೆ ತಲುಪಿಸಿದ್ದರು. ಬಳಿಕ ಮಠದವರು ಬಂದು ಮಗುವನ್ನು ಕರೆದೊಯ್ದಿದ್ದರು.
ಕೆಲವರು ಮಗುವನ್ನು ತಮಗೆ ಕೊಡಿ ನೋಡಿಕೊಳ್ಳುವುದಾಗಿ ಹೇಳಿದ್ದರಂತೆ. ಸ್ವಲ್ಪ ಆಸ್ತಿಯನ್ನು ಮಗುವಿನ ಹೆಸರಲ್ಲಿ ಮಾಡಿದರೆ ಮಗುವನ್ನು ಕೊಡುವುದಾಗಿ ಹೇಳಿದ್ದರಂತೆ.
ಅಂದಿನಿಂದ ಮಗು ಮಠದಲ್ಲಿಯೇ ಚೆನ್ನಾಗಿ ಬೆಳೆಯುತ್ತಿದೆ. ಆಗಾಗ ಮಗುವನ್ನು ಕಂಡು ನಾನು ಮಾತನಾಡಿಸುತ್ತಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ.
ಭಾರಿ ಮಳೆ; ನದಿ ನೀರಿನಲ್ಲಿ ಕೊಚ್ಚಿ ಹೋದ ಯುವಕರು
https://pragati.taskdun.com/latest/heavy-rainyouth-washedawaykumadvati-river/
ಬೆಂಗಳೂರಿನಲ್ಲಿ ಉಚಿತ ಬಸ್ ಪ್ರಯಾಣ ಬೆಂಬಲಿಸುವವರ ಸಂಖ್ಯೆ ಅಧಿಕ
https://pragati.taskdun.com/latest/75-commuters-support-free-bus-travel-in-bengaluru-karnataka/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ