Kannada NewsLatest

ಕೆಎಲ್‌ಇ ಸಂಗೀತ ವಿದ್ಯಾಲಯದವರಿಂದ ವಿಶ್ವ ಸಂಗೀತ ದಿನಾಚರಣೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಕೆಎಲ್‌ಇ ಸಂಗೀತ ಮಹಾವಿದ್ಯಾಲಯದ ವತಿಯಿಂದ ಇಲ್ಲಿನ ಡಾ. ಪ್ರಭಾಕರ್ ಕೋರೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಶುಕ್ರವಾರ ವಿಶ್ವ ಸಂಗೀತ ದಿನಾಚರಣೆಯನ್ನು ಆಚರಿಸಲಾಯಿತು.
ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸುಮಾರು ಒಂದು ಗಂಟೆಗಳ ಕಾಲ ಸಂಗೀತ ವಿಭಾಗದ ವಿದ್ಯಾರ್ಥಿಗಳು ರಾಗ ಕೇದಾರ ಪುರಿಯಾ ಧನಶ್ರೀ ಶಂಕರಾ ಬಿಹಾಗ ರಾಗೆ ಶ್ರೀಗಳಿಂದ ನೆರೆದವರನ್ನು ಮಂತ್ರಮುಗ್ಧಗೊಳಿಸಿದರು.
ಕೊನೆಯಲ್ಲಿ ರಾಗ ಭೈರವಿ ಹಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಂಯೋಜಕರಾದ ಡಾ. ಎಂವಿ ಜಾಲಿ, ಡಾಕ್ಟರ್ ರಾಜೇಂದ್ರ ಬಾಂಡನಕರ , ಡಾಕ್ಟರ್ ಶಿರಗಾವಿ ಹಾಗೂ ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ಸ್ನೇಹಾ ರಾಜೂರಿಕರ, ಪ್ರಾಧ್ಯಾಪಕರಾದ ಸುನೀತಾ ಪಾಟೀಲ್, ಡಾ.ದುರ್ಗಾ ಕಾಮತ್ ನಾಡಕರ್ಣಿ ಉಪಸ್ಥಿತರಿದ್ದರು.
ಈ ಸಂಗೀತ ಕಾರ್ಯಕ್ರಮಕ್ಕೆ ತಬಲಾ ಸಾಥ್ ಜಿತೇಂದ್ರಸಾಬಣ್ಣನವರ ಹಾಗೂ ಹಾರ್ಮೋನಿಯಂ ಸಾಥ್ ಯಾದವೇಂದ್ರ ಪೂಜಾರಿ ನೀಡಿದರು. ಸುಹಾಸಿನಿ ತಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button