Kannada NewsLatest

ನಿವೇದಾರ್ಪಣ ಅಕಾಡೆಮಿಯಿಂದ ಸಂಗೀತ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ನಿವೇದಾರ್ಪಣ ಸಂಗೀತ ಅಕಾಡೆಮಿ ವತಿಯಿಂದ ಬೆಳಗಾವಿ ಮತ್ತು ಬೆಂಗಳೂರನಲ್ಲಿ ಕರೋಕೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಜೂ.16 ರಂದು ಸಂಜೆ 5 ಗಂಟೆಗೆ ಬೆಳಗಾವಿಯ ನಿವೇದಾರ್ಪಣ ಅಕಾಡೆಮಿ ಆಫ್ ಮ್ಯೂಸಿಕ್, ರಾಣಿ ಚೆನ್ನಮ್ಮ ನಗರದಲ್ಲಿ ಅಕಾಡೆಮಿ ಆವರಣದಲ್ಲಿ “ಮನ್ ಕೀ ಗೀತ” ಎಂಬ ಹಿಂದಿ ಮತ್ತು ಕನ್ನಡ ಚಿತ್ರ ಗೀತೆಗಳ ಕರೋಕೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅದೇ ರೀತಿ ಅಕ್ಯಾಡಮಿಯ “ಶರಧಿ”ತಂಡದ ವತಿಯಿಂದ ಜೂ.23 ರಂದು ಸಂಜೆ 5 ಗಂಟೆಗೆ ಬೆಂಗಳೂರಿನಲ್ಲಿ ಸ್ವರ ಚಿರಂತನ ಎಂಬ ಸಂಸ್ಥೆಯ ಸಹಯೋಗದಲ್ಲಿ ಪ್ರಯೋಗ ಸ್ಟೂಡಿಯೋದಲ್ಲಿ (ಕತ್ರಿಗುಪ್ಪೆ ಸಿಗ್ನಲ್,ಬಿ ಎಸ್ ಕೆ , ೩ನೆ ಹಂತ) ಬೆಳ್ಳಿ ತೆರೆಯ ಮಧುರ ಗೀತೆಗಳ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಿವೇದಿತಾ ಚಂದ್ರಶೇಖರ ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button