Latest

ಮುತ್ತೂಟ್ ಫೈನಾನ್ಸ್ ಗೆ ನುಗ್ಗಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾದ ದುಷ್ಕರ್ಮಿಗಳು

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ 7 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಶಾಖೆಯಲ್ಲಿ ನಡೆದಿದೆ.

ಬೆಳಿಗ್ಗೆ 10 ಗಂಟೆ ವೇಳೆಗೆ 6 ಜನ ಬಂದೂಕುಧಾರಿ ದುಷ್ಕರ್ಮಿಗಳು ಕಚೇರಿಗೆ ನುಗ್ಗಿ, ಬ್ರ್ಯಾಂಚ್ ಮ್ಯಾನೇಜರ್ ಗೆ ಜೀವಬೆದರಿಕೆಯೊಡ್ದಿ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ. ಮ್ಯಾನೇಜರ್ ಗೆ ಬೆದರಿಸಿ ಲಾಕರ್ ತೆಗೆಸಿ 7 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ 96 ಸಾವಿರ ರೂಪಾಯಿ ನಗದು ಹಣವನ್ನು ದೋಚಿದ್ದಾರೆ.

ವಾರದ ಹಿಂದೆ ಕೃಷ್ಣಗಿರಿಯ ಶಾಖೆಯಲ್ಲಿ ಕೂಡ ಕಳ್ಳತನ ನಡೆದಿತ್ತು.

Home add -Advt

Related Articles

Back to top button