Politics

*ಬಿಜೆಪಿ ಯಾವತ್ತೂ ಜನಾದೇಶದಿಂದ ಅಧಿಕಾರಕ್ಕೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ ಟಾಂಗ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಎಸ್.ಸಿ. ಪಿ / ಟಿ ಎಸ್ ಪಿ ಕಾಯ್ದೆಯಡಿ 5 ವರ್ಷಗಳಲ್ಲಿ 35464 ಕೋಟಿ ಅನುದಾನ ಹಂಚಿಕೆ ಮಾಡಿ 22480 ಕೋಟಿ ವೆಚ್ಚ ಮಾಡಿದ್ದಾರೆ.

ಈ ಕಾಯ್ದೆ ಬಂದದ್ದಕ್ಕೆ ಜನಸಂಖ್ಯೆ ಅನುಸಾರವಾಗಿ ಹಣ ವೆಚ್ಚ ಮಾಡಬೇಕು. 17.15% ಪ.ಜಾತಿ, ಪ.ವರ್ಗ 6.95% ಎರಡೂ ಸೇರಿ 24.1% ಇದ್ದಾರೆ. ಯೋಜನೆಯ ಹಣದಲ್ಲಿ 24.1 % ಕೂಡಲೇಬೇಕು. ಮೊದಲು ಅಷ್ಟು ಖರ್ಚು ಮಾಡುತ್ತಿರಲಿಲ್ಲ. ಒಂದು ವೇಳೆ ಹಣವನ್ನು ಖರ್ಚು ಮಾಡದೆ ಹೋದರೆ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳಬಹುದು.

ಈ ವರ್ಷ ಖರ್ಚು ಮಾಡಲು ಸಾಧ್ಯವಾಗದಿದ್ದರೆ ಮುಂದಿನ ವರ್ಷಕ್ಕೆ ಅದು ಸೇರಿಕೊಳ್ಳುತ್ತದೆ.

39121 ಕೋಟಿ ಕಳೆದ ವರ್ಷ ಮೀಸಲಿಟ್ಟಿದ್ದು, ಈ ಸಾಲಿಗೆ 42018 ಕೋಟಿ ಮೀಸಲಿಡಲಾಗಿದೆ. ಕಾಯ್ದೆಯನ್ನು ಸಂವಿಧಾನದ ಆಶಯಗಳನ್ನು ಈಡೇರಿಸಲೆಂದು ರೂಪಿಸಲಾಗಿದೆ.

Home add -Advt

ಕೇಂದ್ರ ಸರ್ಕಾರ ಇಂದಿನವರೆಗೆ ಎಸ್.ಸಿ. ಪಿ / ಟಿ ಎಸ್ ಪಿ ಕಾಯ್ದೆಯನ್ನು ಜಾರಿ ಮಾಡಿಲ್ಲ.

ಕಾಯ್ದೆ ಬಂದ ನಂತರ
ಕರ್ನಾಟಕದಲ್ಲಿ ಈ ವರ್ಷ 371273 ಕೋಟಿ ರೂ.ಗಳ ಬಜೆಟ್ ನಲ್ಲಿ 27674 ಎಸ್.ಸಿ. ಪಿ / ಟಿ ಎಸ್ ಪಿ ಗಾಗಿ ಶೇ. 7.46%ಮೀಸಲಿಟ್ಟಿದೆ. ಗುಜರಾತ್ ನಲ್ಲಿ 3,70,000 ಹಣ ಬಜೆಟ್ ನಲ್ಲಿ ಮೀಸಲಿಟ್ಟಿದ್ದು, ಎಸ್.ಸಿ. ಪಿ / ಟಿ ಎಸ್ ಪಿ ಗಾಗಿ ಶೇ 2.38% ಮೀಸಲಿಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಬಜೆಟ್ 612293 ಇದ್ದಾರೆ, 187650 3.6% ಇಟ್ಟಿದೆ.

ಕೇಂದ್ರ ಸರ್ಕಾರ 4820512 ಕೋಟಿ ಬಜೆಟ್ ಗಾತ್ರದಲ್ಲಿಎಸ್.ಸಿ. ಪಿ / ಟಿ ಎಸ್ ಪಿ ಗಾಗಿ 138368 ಇದ್ದು 2.87% ಮೀಸಲಿಟ್ಟಿದೆ.

ಕರ್ನಾಟಕ ಮಾದರಿಯಲ್ಲೇ ಕೇಂದ್ರ ಸರ್ಕಾರ ಎಸ್.ಸಿ. ಪಿ/ ಟಿ ಎಸ್ ಪಿ ಕಾಯ್ದೆ ಜಾರಿ ಮಾಡಲಿ ಎಂದು ಸರ್ವಾನುಮತದ ನಿರ್ಣಯ ಮಾಡೋಣ ಎಂದು ಕರೆ ನೀಡಿದರು.

2019-23 ಸಾಲಿನಲ್ಲಿ ಈವರೆಗೆ ಅದಿಕಾರದಲ್ಲಿದ್ದ ಬಿಜೆಪಿ ಡೀಮ್ಡ್ ವೆಚ್ಚದಲ್ಲಿ ಏಕೆ ವೆಚ್ಚ ಮಾಡಲಿಲ್ಲ? ದಲಿತ ಸಂಘಟನೆಗಳು ಮೊದಲಿನಿಂದಲೂ ಬೇಡಿಕೆ ಯಿಟ್ಟಿರುವಂತೆ ನಮ್ಮ ಅಧಿಕಾರಾವಧಿಯಲ್ಲಿ ಕಾಯ್ದೆಯಲ್ಲಿ 7ಡಿ ತೆಗೆದು ಹಾಕಲಾಯಿತು.
ಬಿಜೆಪಿ ಯವರು ಏಕೆ ತೆಗೆಯಲಿಲ್ಲ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಇಡೀ ದೇಶದಲ್ಲಿ ಎಸ್ ಸಿ/ ಎಸ್ ಟಿ ಗಳ ಜನಸಂಖ್ಯೆ 2011ರ ಜನಗಣತಿ ಪ್ರಕಾರ ಶೇ16.6% ಎಸ್.ಸಿ ಹಾಗೂ ಶೇ 8.6% ಎಸ್.ಟಿ ಇದ್ದು, ಎರಡೂ ಸೇರಿ ಒಟ್ಟು ಶೇ27.2 % ಇದ್ದಾರೆ. ಇವರ ಜನಸಂಖ್ಯೆಗನುಗುಣವಾಗಿ ಬಿಜೆಪಿ ಯವರು ಖರ್ಚು ಮಾಡಲಿಲ್ಲ. ಕೇವಲ ಶೇ2.87% ಖರ್ಚು ಮಾಡಿದ್ದಾರೆ.

ದೇಶದಲ್ಲಿ ಪರಿ.ಜಾ16.6% ಪಂ.ವರ್ಗ 8.6% ಸೇರಿ ಒಟ್ಟು 25.2% ಇದ್ದು ಕೇವಲ 2.87% ವೆಚ್ಚ ಮಾಡಿದ್ದಾರೆ. 7ಡಿ ಬಗ್ಗೆ ಬಹಳ ದಿನಗಳಿಂದ ಒತ್ತಾಯವಿತ್ತು. ಆದ್ದರಿಂದ ಕಳೆದ ವರ್ಷ ತಿದ್ದುಪಡಿ ತಂದು ತೆಗೆದುಹಾಕಿದೆವು 7ಸಿ ತೆಗೆದುಹಾಕಿಲ್ಲ ಎಂದರು.

Related Articles

Back to top button