Kannada NewsKarnataka NewsLatest

ನನ್ನ ಏಕೈಕ ಗುರಿ ಅದೊಂದೇ….. ಎಂದ ರಮೇಶ ಜಾರಕಿಹೊಳಿ, ಏನದು?

ಮಂತ್ರಿ ಸ್ಥಾನ ಸಿಗದಿದ್ದರೂ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ತೆಗೆದ ಖುಷಿ ಇದೆ ಎಂದ ರಮೇಶ್

 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ನನಗೆ ಈಗ ಮಂತ್ರಿ ಗಿಂತ್ರಿ ಆಗಬೇಕೆಂದಿಲ್ಲ. ನನ್ನ ಗುರಿ ಏನಿದ್ದರೂ 2023ರ ಚುನಾವಣೆ. ಆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ತರುವುದೇ ನನನ್ನ ಏಕೈಕ ಗುರಿ ಎಂದು ರಮೇಶ ಜಾರಕಿಹೊಳಿ ತಿಳಿಸಿದರು.

ಅಥಣಿಯಲ್ಲಿ ಮಾತನಾಡಿದ ಅವರು, ಅಥಣಿ ಕ್ಷೇತ್ರ ಕಳೆದ 5 -6 ತಿಂಗಳಲ್ಲಿ ಅಭಿವೃದ್ಧಿಯಲ್ಲಿ ಸ್ವಲ್ಪ ಹಿಂದುಳಿದಿದೆ. ಕ್ಷೇತ್ರದಲ್ಲಿ ನೀರಾವರಿ ಅಭಿವೃದ್ಧಿಪಡಿಸುತ್ತೇವೆ. ನಾನು ಮಂತ್ರಿಯಾಗಿದ್ದಾಗ ಕೈಗೆತ್ತಿಕೊಂಡಿದ್ದ ಕೆಲವು ಯೋಜನೆಗಳು ಮುಂದುವರಿದಿಲ್ಲ. ಅವುಗಳನ್ನು ಪೂರ್ತಿಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಸಚಿವನಾಗುವ ಯಾವುದೇ ಆಸೆಯಿಲ್ಲ, ನಾನು ಮಂತ್ರಿ ಸ್ಥಾನಕ್ಕಿಂತ ಮೇಲಿದ್ದೇನೆ ಎಂದು ಹೇಳಿದ್ದಾರೆ.

ನನಗೆ ಮಂತ್ರಿ ಸ್ಥಾನ ಸಿಗಲಿ, ಸಿಗದೇ ಇರಲಿ, ಆದರೆ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ತೆಗೆದ ಖುಷಿ ಇದೆ. ಇಲ್ಲವಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಬಿಡುತ್ತಿತ್ತು, ಈಗ ಸಂತೋಷವಾಗಿದ್ದೇನೆ ಎಂದಿದ್ದಾರೆ.

ಸಚಿವರಾಗಬೇಕು ಎಂಬ ಆಸೆ ಜಾರಕಿಹೊಳಿ ಕುಟುಂಬಕ್ಕೆ ಇಲ್ಲ. ಸರ್ಕಾರದಲ್ಲಿ ನಾವು ಸಚಿವರಾಗ್ತಿವೋ ಬಿಡ್ತಿವೋ ಆದರೆ ನಾನೀಗಲೂ ಮಂತ್ರಿಗಿಂತ ಹೆಚ್ಚಿದ್ದೇನೆ ಎಂದು ಹೇಳಿದರು.

ಶಾಸಕ ಸ್ಥಾನದಿಂದ ರಾಜೀನಾಮೆ ನೀರ್ಧಾರದಿಂದ ಹಿಂದೆ ಸರಿದಿದ್ದೇನೆ. ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ. ಆದರೆ ಸುತ್ತೂರು ಶ್ರೀಗಳು ಕೆಲ ಸಲಹೆ ಸೂಚನೆ ನೀಡಿದರು. ಹಾಗಾಗಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದೆ. ಕಾಂಗ್ರೆಸ್ ನವರು 20 ವರ್ಷ ನಡೆಸಿಕೊಂಡಷ್ಟು, ಬಿಜೆಪಿ ಹೈಕಮಾಂಡ್ 1 ವರ್ಷದಲ್ಲಿ ನಮ್ಮನ್ನು ನಡೆಸಿಕೊಂಡಿದೆ. ಅವರ ಪ್ರೀತಿ ವಿಶ್ವಾಸಕ್ಕೆ ಬಿಜೆಪಿಯಲ್ಲಿ ಮುಂದುವರೆದಿದ್ದೇನೆ ಎಂದರು.

ಇದೇ ವೇಳೆ ಸಿಡಿ ಕೇಸ್ ಬಗ್ಗೆಯೂ ಮಾತನಾಡಿದ ಜಾರಕಿಹೊಳಿ, ಪ್ರಕರಣವನ್ನು ಇನ್ನೂ ಒಂದು ವರ್ಷ ಬೇಕಾದರೂ ಹಾಗೇ ಇಟ್ಟಿರಲಿ. ನನಗೇನೂ ಅವಸರವಿಲ್ಲ. ನನ್ನ ತಮ್ಮ ಇದ್ದಾನೆ, ಮಹೇಶ್ ಕುಮಟಳ್ಳಿ ಇದ್ದಾರೆ. ನಾನೇ ಸಚಿವನಾಗಬೇಕು ಎಂಬ ಆಸೆ ನನಗಿಲ್ಲ, ಈ ಅವಧಿಯಲ್ಲಿ ಸಚಿವರಾಗದಿದ್ದರೂ ಪರವಾಗಿಲ್ಲ. ಸಿದಿ ಕೇಸ್ ಕೋರ್ಟ್ ನಲ್ಲಿರುವುದರಿಂದ ಈ ಬಗ್ಗೆ ಚರ್ಚೆ ಮಾಡಲ್ಲ ಎಂದು ಹೇಳಿದರು.

 

ಸಾರ್ವಜನಿಕರ ಎದುರೇ ಏಕವಚನದಲ್ಲಿ ವಾಕ್ಸಮರ; ಕೈ ಕೈ ಮಿಲಾಯಿಸುವ ಹಂತ ತಲುಪಿದ ಜೆಡಿಎಸ್ ಶಾಸಕ- ಬಿಜೆಪಿ ಸಂಸದ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button