Latest

ಮಿಲಿಟರಿ ದಾಳಿಗೆ ಮಕ್ಕಳು, ಮಹಿಳೆಯರು ಸೇರಿ 30ಕ್ಕೂ ಹೆಚ್ಚು ಜನ ಬಲಿ

ಪ್ರಗತಿವಾಹಿನಿ ಸುದ್ದಿ; ಮ್ಯಾನ್ಮಾರ್: ಮ್ಯಾನ್ಮಾರ್ ನ ಕಯಾಹ್ ರಾಜ್ಯದಲ್ಲಿ ಸೇನಾ ದಾಳಿಗೆ ಮಹಿಳೆಯರು, ಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಮ್ಯಾನ್ಮಾರ್ ಭದ್ರತಾ ಪಡೆಗಳ ನಿಯಂತ್ರಣದಲ್ಲಿದ್ದು, ಅಪರಿಚಿತ ಉಗ್ರರನ್ನು ಸಡೆಬಡಿಯುವ ನಿಟ್ಟಿನಲ್ಲಿ ನಡೆಸಿದ ದಾಳಿಯಲ್ಲಿ ಮಕ್ಕಳು, ಮಹಿಳೆಯರು ಹಿರಿಯ ನಾಗರಿಕರು ಸಾವನ್ನಪ್ಪಿದ್ದು, ಕರೆನ್ನಿ ಮಾನವ ಹಕ್ಕುಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಅಪರಿಚಿತ ಉಗ್ರರು ಏಳು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದವು. ಅವರ ಬಳಿ ಶಸ್ತ್ರಾಸ್ತ್ರಗಳಿದ್ದವು. ಭದ್ರತಾಪಡೆಗಳು ಹೇಳಿದರೂ ವಾಹನ ನಿಲ್ಲಿಸದೇ ಪರಾರಿಯಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡು ಗುಂಡಿನ ದಾಳಿ ನಡೆಸಲಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ ಜನರನ್ನು ಅಮಾನವೀಯವಾಗಿ ಹತ್ಯೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಸೇನಾ ದಾಳಿಗೆ ಆಕ್ರೋಶ ವ್ಯಕ್ತವಾಗಿದೆ. ಇನ್ನೊಂದೆಡೆ ಮ್ಯಾನ್ಮಾರ್ ಮಿಲಿಟರಿ ಹಾಗೂ ಬಂಡುಕೋರರ ಗುಂಪಿನ ನಡುವೆ ಥಾಯ್ ಗಡಿ ಸಮೀಪದಲ್ಲಿ ಸಂಘರ್ಷ ನಡೆದಿದೆ.
ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಘೋಷಣೆ

Home add -Advt

Related Articles

Back to top button