Kannada NewsKarnataka NewsLatest
*ಮೈಸೂರು ದಸರಾ: ಈ ಬಾರಿ ಜಂಬೂಸವಾರಿಯಲ್ಲಿ ಯಾವೆಲ್ಲ ಆನೆಗಳು ಭಾಗಿಯಾಗಲಿವೆ? ಇಲ್ಲಿದೆ ಲಿಸ್ಟ್*

ಪ್ರಗತಿವಾಹಿನಿ ಸುದ್ದಿ: ನಾಡ ಹಬ್ಬ, ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಭಾರಿ ಸಿದ್ಧತೆಗಳು ಆರಂಭವಾಗಿವೆ. ದಸರಾದ ಪ್ರಮುಖ ಆಕರ್ಷಣೆ ಜಂಭೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಆಯ್ಕೆ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.
ಜಂಬೂ ಸವಾರಿಯಲ್ಲಿ ಒಟ್ಟು 14 ಆನೆಗಳು ಪಾಲ್ಗೊಳ್ಳಲಿದ್ದು, ಅವುಗಳಲ್ಲಿ 9 ಆನೆಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಈ ಬಾರಿಯೂ ಅಭಿಮನ್ಯು ಆನೆ ಗಜಪಡೆಯ ಕ್ಯಾಪ್ಟನ್ ಆಗಿ ಚಿನ್ನದ ಅಂಬಾರಿ ಹೊರಲಿದೆ. ಆಗಸ್ಟ್ 4ರಂದು ಮೊದಲ ಹಂತದಲ್ಲಿ 9 ಆನೆಗಳು ನಾಗರಹೊಳೆ ಹೆಬ್ಬಾಗಿಲಿನಿಂದ ಮೈಸೂರಿಗೆ ಆಗಮಿಸಲಿವೆ.
ಕ್ಯಾಪ್ಟನ್ ಅಭಿಮನ್ಯು, ಭೀಮ, ಪ್ರಶಾಂತ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಕಾವೇರಿ, ಲಕ್ಷ್ಮೀ ಆನೆಗಳು ಮೊದಲ ಪಟ್ಟಿಯಲ್ಲಿದ್ದಾರೆ.
ಆಗಸ್ಟ್ 4ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನ ಹೊಸಳ್ಳಿ ನಾಗರಹೊಳೆ ಹೆಬ್ಬಾಗಿಲಿನಿಂದ ಗಜಪಯಣಕ್ಕೆ ಚಾಲನೆ ದೊರೆಯಲಿದೆ.