ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಜಂಬೂ ಸವಾರಿಗೆ ಚಾಲನೆ ದೊರೆತಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಸಾಂಪ್ರದಾಯಿಕವಾಗಿ ಅರಮನೆಗೆ ಮಾತ್ರ ಸೀಮಿತವಾಗಿದ್ದ ಮೈಸೂರು ದಸರಾ ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಮಧ್ಯಾಹ್ನ 2:36ರಿಂದ 2:50ರ ಶುಭ ಮಕರ ಲಗ್ನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಕುಟುಂಬ ಸಮೇತರಾಗಿ ಮೈಸೂರು ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಕಂಭಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಸ್.ಟಿ.ಸೋಮಶೇಖರ್, ಸಚಿವ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಸಂಜೆ 5:40ರ ವೇಳೆಗೆ ಶುಭ ಮುಹೂರ್ತದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಅಭಿಮನ್ಯು ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿರುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ, ಯದುವೀರ್ ಒಡೆಯರ್, ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ಅಭಿಮನ್ಯು ಆನೆ ಮೂರನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ರಾಜಗಾಂಭೀರ್ಯದಿಂದ ಸಾಗಿದ್ದು, ಅರ್ಜುನ ನಿಶಾನೆ, ಚೈತ್ರ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಜಂಬೂ ಸವಾರಿಯಲ್ಲಿ ಸಾಗಿವೆ. ಮೆರವಣಿಗೆಯಲ್ಲಿ ಒಟ್ಟು 9 ಆನೆಗಳು ಸಾಗಿವೆ.
ಜಂಬೂ ಸವಾರಿ ಮೆರವಣಿಗೆ ಅರಮನೆಯಿಂದ ಕೆ ಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಆರ್ ಎಂ ಸಿ, ತಿಲಕ್ ನಗರ ರಸೆಗಳ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಲಿದೆ.
ಸ್ತಬ್ಧಚಿತ್ರಗಳ ಮೆರವಣಿಗೆ:
ಜಂಬೂ ಸವಾರಿ ಮೆರವಣಿಗೆಯಲ್ಲಿ 47 ಸ್ಥಬ್ಧಚಿತ್ರಗಳು ಭಾಗವಹಿಸಿದ್ದು, 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವನ್ನು ಪ್ರಾಮುಖ್ಯತೆ ಪ್ರತಿನಿಧಿಸುವ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿವೆ. ಬೆಳಗಾವಿ ಜಿಲ್ಲಾಡಳಿತದಿಂದ ರೆಣುಕಾ ಯೆಲ್ಲಮ್ಮ ದೇವಸ್ಥಾನದ ಸ್ಥಬ್ದಚಿತ್ರ ಪ್ರದರ್ಶನವಾಗುತ್ತಿದೆ. ಇನ್ನು ದಿ.ಪುನೀತ್ ರಾಜ್ ಕುಮಾರ್ ಅವರ ಸ್ಥಬ್ಧಚಿತ್ರ ಪ್ರದರ್ಶನವಾಗುತ್ತಿರುವುದು ಮತ್ತೊಂದು ವಿಶೇಷ.
ಮೆರವಣಿಗೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ಶ್ವಾನ, ಇಳಕಲ್ ಸೀರೆ, ದುರ್ಗಾಂಬ ದೇವಸ್ಥಾನ
ಬಳ್ಳಾರಿ ಜಿಲ್ಲೆಯ ದುರ್ಗಾಂಬ ದೇವಸ್ಥಾನ, ಮಿಂಜೇರಿ ಗುಡ್ಡ, ಬಳ್ಳಾರಿ ಕೋಟೆ
ಬೆಳಗಾವಿ ಜಿಲ್ಲೆಯ ಶ್ರೀ ರೇಣುಕಾದೇವಿ ದೇವಸ್ಥಾನ, ಕಮಲ ಬಸಿದಿ
ಬೆಂಗಳೂರು ಗ್ರಾಮಾಂತರದ ಮನ್ಯಾಪುರ ದೇವಸ್ಥಾನ, ಕಪಿಲೇಶ್ವರ ದೇವಸ್ಥಾನ, ಜೈನಬಸಿದಿ, ಸಿಂಪಾಡಿಪುರ ವೀಣೆ
ಬೆಂಗಳೂರು ನಗರ ಜಿಲ್ಲೆಯ ಕಡಲೆಕಾಯಿ ಪರಿಷೆ, ಬಸವನಗುಡಿ
ಬೀದರ್ ಜಿಲ್ಲೆಯ ನೂತನ ಅನುಭವ ಮಂಟಪ
ಚಾಮರಾಜನಗರದ ವನ್ಯಧಾಮ, ಶ್ರೀಮಹದೇಶ್ವರ ವಿಗ್ರಹ, ಪುನೀತ್ ರಾಜ್ ಕುಮಾರ್ ಪ್ರತಿಮೆ
ಚಿಕ್ಕಬಳ್ಳಾಪುರದ ಗ್ರೀನ್ ನಂದಿ-ಕ್ಲೀನ್ ನಂದಿ, ಭೋಗೇಶ್ವರ ದೇವಸ್ಥಾನ
ಚಿಕ್ಕಮಗಳೂರು-ದ್ವಾದಶ ಜಿಲ್ಲೆಗಳಿಗೆ ಜೀವನಾಡಿ ಚಿಕ್ಕಮಗಳೂರು ಜಿಲ್ಲೆಯು ಸಪ್ತನದಿಗಳ ತವರು
ಮೈಸೂರು – ಮೈಸೂರು ಜಿಲ್ಲೆ ವಿಶೇಷತೆಗಳು
ಉತರ ಕನ್ನಡ- ಕಾರವಾರ ನೌಕಾನೆಲೆ
ಶಿವಮೊಗ್ಗ – ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ
ಚಿತ್ರದುರ್ಗ- ವಾಣಿವಿಲಾಸ ಜಲಾಶಯ, ಒನಕೆ ಓಬವ್ವ, ಕುದುರೆ ಮೇಲೆ ಆಸನರಾಗಿರುವ ಮದಕರಿ ನಾಯಕ, ದೀಪಸ್ತಂಭ
ದಕ್ಷಿಣ ಕನ್ನಡ-ಕಂಬಳ, ಹುಲಿವೇಷ, ಭೂತ ಕೋಲ
ದಾವಣಗೆರೆ-ಸಂತೆ ಬೆನ್ನೂರು ಪುಷ್ಕರಣಿ
ಧಾರವಾಡ-ಸಂಗೀತ ದಿಗ್ಗಜರು
ಗದಗ-ಶ್ರೀಕ್ಷೇತ್ರ ಶ್ರೀಮಂತಗಡ, ಹೊಳಲಮ್ಮ ದೇವಿ ಮತ್ತು ಶಿವಾಜಿ
ಹಾಸನ – ಚನ್ನಕೇಶ್ವರ ದೇವಸ್ಥಾನ, ಶ್ರವಣಬೆಳಗೊಳ-ಗೊಮ್ಮಟೇಶ್ವರ
ಹಾವೇರಿ – ಗುರು ಗೋವಿಂದಭಟ್ರು, ಸಂತೆ ಶಿಶುನಾಳ ಷರೀಫರು, ಮುಕ್ತೇಶ್ವರ ದೇವಸ್ಥಾನ
ಕಲಬುರಗಿ – ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ, ವನ್ಯಜೀವಿಧಾಮ
ಕೊಡಗು – ಬ್ರಹ್ಮಗಿರಿ ಬೆಟ್ಟ, ಬೃಗಂದೇಶ್ವರ ದೇವಸ್ಥಾನ, ತಲಕಾವೇರಿ ತೀರ್ಥೋದ್ಭವ, ಇರ್ಪು ಜಲಾಶಯ
ಕೋಲಾರ – ಬಿ ಕೆ ಎಸ್ ಅಯ್ಯಂಗಾರ್ ಯೋಗನಾಥ್ ಹಾಗೂ ಅಂರತಗಂಗೆ ಬೆಟ್ಟ
ಕೊಪ್ಪಳ – ಆನೆಗುಂದಿ ಬೆಟ್ಟ, ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟ
ಮಂಡ್ಯ – ಜಿಲ್ಲೆಯ ದೇವಾಲಯಗಳು
ರಾಯಚೂರು – ಸಿರಿಧಾನ್ಯ ಬೆಳೆಗಳ ಅಭಿಯಾನ ಸೇರಿದಂತೆ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳು ಕಣ್ಮನ ಸೆಳೆದಿವೆ.
ನಂದಿಧ್ವಜ ಕಂಭಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಸಿಎಂ; ಜಂಬೂ ಸವಾರಿಗೆ ಕ್ಷಣಗಣನೆ
https://pragati.taskdun.com/latest/mysore-dasaranandidhwaja-poojecm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ