
ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ 2 ವರ್ಷದ ಮಗು ಮೃತಪಟ್ಟಿರುವ ಘಟನೆ ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ರಾಮು ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರಿ ಆದ್ಯಾ ಮೃತ ಮಗು. ಮಗುವಿಗೆ ಸ್ನಾನ ಮಾಡಿಸುವಾಗ ಬಿಸಿ ನೀರು ಮಾಡಿಟ್ಟು, ಮಗುವನ್ನು ಬಾತ್ ರೂಂ ನಲ್ಲಿ ಕೂಡ್ರಿಸಲಾಗಿತ್ತು. ನಂತರ ಬಿಸಿ ಜಾಸ್ತಿಯಾಯಿತೆಂದು ತಣ್ಣೀರು ತರಲೆಂದು ತಾಯಿ ಹೋಗಿದ್ದಾಗ ಮಗು ತಿಳಿಯದೇ ಮೈಮೇಲೆ ಬಿಸಿನೀರು ಸುರಿದುಕೊಂಡಿದೆ.
ಗಂಭೀರವಾಗಿ ಗಾಯಗೊಂಡಿದ್ದ ಆದ್ಯಾಳನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ.
ಬೆಳಗಾವಿ: 2 ಮತಗಳನ್ನು ತಿರಸ್ಕರಿಸಿದ ಮತ ಎಣಿಕೆ ಸಿಬ್ಬಂದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ