Latest

ಲಾಡ್ಜ್ ನಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾದ ಉದ್ಯಮಿಯ ಶವ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಶವ ಮೈಸೂರಿನ ಲಾಡ್ಜ್ ಒಂದರಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

ಉಮಾಶಂಕರ್ (45) ಮೃತ ಉದ್ಯಮಿ. ಪತ್ನಿಯ ಜೊತೆ ಲಾಡ್ಜ್ ಗೆ ಬಂದಿದ್ದ ಉಮಾಶಂಕರ್. ಅದರೆ ಬೆಳಿಗ್ಗೆ ಪತ್ನಿ ಕವಿತಾ ನಾಪತ್ತೆಯಾಗಿದ್ದಾರೆ. ಲಾಡ್ಜ್ ನಲ್ಲಿ ಉದ್ಯಮಿ ಉಮಾಶಂಕರ್ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ.

Home add -Advt

ಲಾಡ್ಜ್ ನ ಕೊಠಡಿಯಲ್ಲಿ ಇನ್ಸುಲಿನ್ ಪತ್ತೆಯಾಗಿದೆ. ಅತಿಯಾದ ಇನ್ಸುಲಿನ್ ನಿಂದ ಉಮಾಶಂಕರ್ ಸಾವನ್ನಪ್ಪಿರುವ ಶಂಕೆಯೂ ವ್ಯಕ್ತವಾಗಿದೆ. ಇದೇ ವೇಳೆ ಕೊಠಡಿಯಲ್ಲಿ ಪತ್ರ ಕೂಡ ಸಿಕ್ಕಿದ್ದು, ಪತ್ರದಲ್ಲಿ ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದು ಉಮಾಶಂಕರ್ ಹಾಗೂ ಪತ್ನಿ ಕವಿತಾ ಸಹಿ ಹಾಕಿದ್ದಾರೆ.

ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಕವಿತಾಗಾಗಿ ಹುಡುಕಾಟ ನಡೆಸಲಾಗುತ್ತಿದೆ.

 

Related Articles

Back to top button