ಪ್ರಗತಿವಾಹಿನಿ ಸುದ್ದಿ; ಮೈಸೂರು: ಅರಮನೆನಗರಿ ಮೈಸೂರಿನಲ್ಲಿ ದಿನ ದಿನಕ್ಕೂ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇದೀಗ ಯಾರ ಸಂಪರ್ಕ ಇರದೇ ಇರುವ 72 ವರ್ಷದ ವೃದ್ಧನಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತನ ಸ್ಥಿತಿ ಗಂಭೀರವಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ವ್ಯಕ್ತಿ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಕೋವಿಡ್-19 ಪಾಸಿಟಿವ್ ಬಂದಿದೆ. ವ್ಯಕ್ತಿಯನ್ನು ಐಸೋಲೇಷನ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಗಿದೆ.
ಈ ವ್ಯಕ್ತಿಗೆ ನಂಜನಗೂಡು ಫಾರ್ಮಾ ಕಂಪನಿ ಅಥವಾ ಇಲ್ಲಿನ ನೌಕರರ ಜೊತೆಯಾಗಲಿ, ದೆಹಲಿಯ ನಿಜಾಮುದ್ದೀನ್ ಸಂಪರ್ಕವಾಗಲಿ ಇಲ್ಲ. ಅಲ್ಲದೇ ಯಾವುದೇ ಕೊರೊನಾ ಪೀಡಿತ ವ್ಯಕ್ತಿಗಳ ಜೊತೆ ಕೂಡ ಸಂಪರ್ಕ ಇಲ್ಲ. ಆದರೂ ಇವರಲ್ಲಿ ಸೋಂಕು ಕಂಡುಬಂದಿರುವುದು ಮೈಸೂರಿನ ಜನತೆಯನ್ನು ಆತಂಕಕ್ಕೀಡು ಮಾಡಿದೆ.
ಈ ವೃದ್ಧ ಆರಂಭದದಲ್ಲಿ ಮೈಸೂರಿನ ಶ್ರೀ ಮಹದೇಶ್ವರ ನರ್ಸಿಂಗ್ ಹೋಂ ನಲ್ಲಿ ಉಸಿರಾಟದ ತೊಂದರೆಯಿಂದ ದಾಖಲಾಗಿದ್ದರು. ಇಲ್ಲಿ ರಕ್ತಪರೀಕ್ಷೆ ಮಾಡಲಾಗಿತ್ತು. ನಂತರ ಆಂಟಿಬಯೋಟಿಕ್ ಕೊಟ್ಟು ಅಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಈಗ ಆ ವ್ಯಕ್ತಿಗೆ ಕರೋನಾ ಸೋಂಕು ದೃಢವಾಗಿದೆ. ಇದರಿಂದ ಇಡೀ ನರ್ಸಿಂಗ್ ಹೋಂ ನಲ್ಲಿದ್ದ ಎಲ್ಲಾ ವೈದ್ಯರು, ನರ್ಸ್ ಗಳು, 200 ರೋಗಿಗಳು ಎಲ್ಲರನ್ನೂ ಮೈಸೂರು ಜಿಲ್ಲಾಡಳಿತ ಹೋಂ ಕ್ವಾರಟೈನ್ ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ