Karnataka News
*ಮತ್ತೊಂದು ವಿಕೃತಿ ಮೆರೆದ ದುಷ್ಕರ್ಮಿಗಳು: ಹರಕೆಗೆ ಬಿಟ್ಟಿದ್ದ ಕರುವಿನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲನ್ನು ಕೊಯ್ದು ದುಷ್ಕರ್ಮಿಗಳು ವಿಕೃತಿ ಮೆರೆದ ಘಟನೆ ಬೆನ್ನಲ್ಲೇ ಇದೀಗ ಮೈಸೂರಿನಲ್ಲಿಯೂ ಇಂತದ್ದೇ ಘಟನೆ ನಡೆದಿದೆ.
ದೇವಸ್ಥಾನಕ್ಕೆ ಹರಕೆಗೆ ಬಿಟ್ಟಿದ್ದ ಕರುವಿನ ಮೇಲೆ ಹಲ್ಲೆ ನಡೆಸಲಾಗಿದ್ದು, ಬಾಲದ ಮೇಲೆ ಹಾಗೂ ಕರುವಿನ ಹಿಂಭಾಗಕ್ಕೆ ಗಾಯಗೊಳಿಸಿದ್ದಾರೆ. ಕರುವಿನ ಹಿಂಭಾಗಕ್ಕೆ ಗಂಭಿರವಾದ ಗಾಯಗಳಾಗಿದ್ದು, ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಈ ಘಟನೆ ನಡೆದಿದೆ. ಯಾರು ಈ ರೀತಿ ಅಮಾನುಷ ಕೃತ್ಯವೆಸಗಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ