Latest

ಬುಡಕಟ್ಟುಗಳ ಭೂಮಿ ಸಂರಕ್ಷಿಸಬೇಕು: ಪ್ರೊ.ಪಿ.ಈಶ್ವರ ಭಟ್

ಪ್ರಗತಿವಾಹಿನಿ ಸುದ್ದಿ; ಮೈಸೂರು : ಭೂಮಿಯು ಜೀವನೋಪಾಯದ ಮೂಲ. ಬುಡಕಟ್ಟು ಜನಾಂಗ ಉಳಿಯಬೇಕಿದ್ದರೆ ಅವರು ವಾಸಿಸುವ ಪ್ರದೇಶಗಳ ರಕ್ಷಣೆ ಅಗತ್ಯವಾಗಿದೆ’ ಎಂದು ನಿವೃತ್ತ ಕುಲಪತಿ ಪ್ರೊ.ಪಿ.ಈಶ್ವರ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗ ಮತ್ತು ಕಾನೂನು ಶಾಲೆಯ ಸಹಯೋಗದಲ್ಲಿ ಗಂಗೋತ್ರಿಯ ಲಲಿತಕಲಾ ಕಾಲೇಜಿನ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜನಜಾತಿ ಗೌರವ ದಿವಸ’ ಹಾಗೂ ‘ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರುಬುಡಕಟ್ಟು ಪ್ರದೇಶಗಳು ಜಮೀನ್ದಾರರು, ಮಧ್ಯವರ್ತಿಗಳ ಮೂಲಕ ಸಮಾಜದ ಇತರ ಜನಾಂಗಗಳಿಗೆ ಮಾರಾಟವಾಗುತ್ತಿದೆ. ಇಲ್ಲಿ ಮಾರಾಟ ಆಗುತ್ತಿರುವುದು ಕೇವಲ ಬುಡಕಟ್ಟು ಪ್ರದೇಶವಲ್ಲ; ಅವರ ಸಂಸ್ಕೃತಿ ಹಾಗೂ ಗೌರವಯುತ ಬದುಕು ಕೂಡ ಮಾರಾಟವಾಗುತ್ತದೆ. ಈ ಬಗ್ಗೆ ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ಸಂರಕ್ಷಣೆಗೆ ಮುಂದಾಗಬೇಕು:

‘ಬುಡಕಟ್ಟು ಜನಾಂಗವನ್ನು ಉಳಿಸಲು ಸಂವಿಧಾನದಲ್ಲಿ ಅನೇಕ ಅವಕಾಶಗಳಿವೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮೀಸಲಾತಿಅಭಿವೃದ್ಧಿ ಯೋಜನೆಗಳನ್ನು ಸರ್ಕಾರಗಳು ಜಾರಿ ಮಾಡುತ್ತಿವೆ. ಆದರೆ, ಅವರ ಭೂಮಿ ಉಳಿಸುವ ಕಡೆಗೂ ಗಮನಹರಿಸಬೇಕು. ಅರಣ್ಯ ಸಂರಕ್ಷಣಾ ಕಾನೂನಿಂದ ಬುಡಕಟ್ಟು ಪ್ರದೇಶಗಳ ಉಳಿವಿಗೆ ಕೆಲವೊಂದು ತೊಡಕುಗಳಿವೆ. ಈ ಬಗ್ಗೆ ಅಲ್ಲಿ ಕಾಯರ್ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ತಿಳಿದುಕೊಂಡು ಬುಡಕಟ್ಟು ಪ್ರದೇಶದ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಸಂವಿಧಾನವು ಬುಡಕಟ್ಟುಗಳ ಉಳಿವಿಗೆ ವಿವಿಧ ಹಕ್ಕುಗಳನ್ನು ನೀಡಿದೆ. ಆದರೆ, ಅವುಗಳನ್ನು ತಲುಪಿಸುವಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ರಾಜೇಶ್ ಗೌಡ, ಕಾನೂನು ಅಧ್ಯಯನ ವಿಭಾಗ ಮತ್ತು ಕಾನೂನು ಶಾಲೆಯ ಅಧ್ಯಕ್ಷ ಪ್ರೊ.ಟಿ.ಆರ್.ಮಾರುತಿ, ಮೈಸೂರು ಕಾನೂನು ವಿಶ್ವವಿದ್ಯಾಲಯದ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ.ರಮೇಶ್ ಇದ್ದರು.

ಔಷಧ ತಯಾರಿಕಾ ವಲಯದಲ್ಲಿ ಕರ್ನಾಟಕ- ಅಮೆರಿಕಾ ಸಹಕಾರ ಅಗತ್ಯ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

https://pragati.taskdun.com/cm-basavaraj-bommaimeetingrahul-gupta/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button