Belagavi NewsBelgaum News

*ಬೆಳಗಾವಿಗೆ ಆಗಮಿಸಿದ ಇಬ್ಬರ ಮೃತದೇಹ*

ಕುಂಭಮೇಳದಲ್ಲಿ ಕಾಲ್ತುಳಿತ ದುರಂತದಲ್ಲಿ ಸಾವು ಪ್ರಕರಣ

ಪ್ರಗತಿವಾಹಿನಿ ಸುದ್ದಿ: ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದ ಬೆಳಗಾವಿಯ ನಾಲ್ವರ ಮೃತದೇಹ ತಾಯ್ನಾಡಿಗೆ ಆಗಮಿಸಿದೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನಿನ್ನೆ ಭೀಕರ ಕಾಲ್ತುಳಿತ ಸಂಭವಿಸಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದರು. ತಾಯಿ ಮಗಳಾದ ಜ್ಯೋತಿ, ಮೇಘಾ, ಅರುಣ್ ಕೋಪರ್ಡೆ, ಮಹಾದೇವಿ ಮೃತ ದುರ್ದೈವಿಗಳು. ಇಂದು ಅವರ ಮೃತದೇಹ ಬೆಳಗಾವಿಗೆ ಆಗಮಿಸುತ್ತಿದೆ.

Home add -Advt

ಪ್ರಯಾಗ್ ರಾಜ್ ನಿಂದ ರಸ್ತೆ ಮಾರ್ಗವಾಗಿ ದೆಹಲಿಗೆ ಬಂದ ನಾಲ್ಕು ಮೃತದೇಹಗಳಲ್ಲಿ ಎರಡು ಮೃತದೇಹ ದೆಹಲಿಯಿಂದ ಬೆಳಗಾವಿಗೆ ವಿಮಾನದಲ್ಲಿ ಆಗಮಿಸಿದೆ. ಅರುಣ್ ಹಾಗೂ ಮಹಾದೇವಿ ಎಂಬುವವರ ಮೃತದೇಹ ಆಗಮಿಸಿದ್ದು, ಜ್ಯೋತಿ ಹಾಗೂ ಮೇಘಾ ಅವರ ಮೃತದೇಹ ರಾತ್ರಿ ವಿಮಾನದಲ್ಲಿ ಆಗಮಿಸಲಿದೆ.

Related Articles

Back to top button