Latest

ನಾ.ಸು.ಭರತನಳ್ಳಿ ನಿಧನ

ಪ್ರಗತಿವಾಹಿನಿ ಸುದ್ದಿ, ಯಲ್ಲಾಪುರ – ಹಿರಿಯ ಸಾಹಿತಿ, ನಿವೃತ್ತ ಪತ್ರಕರ್ತ ನಾ.ಸು.ಭರತನಳ್ಳಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕಥೆ, ಕವನ, ಅನುವಾತ ಸಾಹಿತ್ಯ ಸೇರಿದಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೆಲಸ ಮಾಡಿದ್ದರು. ಯಲ್ಲಾಪುರ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಶಿರಸಿಯ ಮುನ್ನಡೆ ಪತ್ರಿಕೆಯ ಸಂಪಾದಕರಾಗಿ 25 ವರ್ಷ ಕೆಲಸ ಮಾಡಿದ್ದರು. ಸ್ವರ್ಣವಲ್ಲಿ ಪ್ರಭಾದ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.

ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಪತ್ನಿ ಮತ್ತು 3 ವರ್,ದ ಹಿಂದೆ ಪುತ್ರನನ್ನು ಕಳೆದುಕೊಂಡು ನೊಂದಿದ್ದರು. ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.

Home add -Advt

Related Articles

Back to top button