ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗುಣಮಟ್ಟ ನಿರ್ವಹಣಾ ಸೂಚನೆಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೊಡುವುದಲ್ಲದೆ ವಿದ್ಯಾಲಯ ಮಾನ್ಯತೆ ಗಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ ಅಧ್ಯಕ್ಷ ಡಾ. ಬಿಜೋಯ ಕುಮಾರ ನಂದಾ ಹೇಳಿದರು.
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ದಿನಾಂಕ ೨೮ ಮತ್ತು ೨೯ ಜನೆವರಿ ೨೦೨೧ ರಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC- National Assessment and Accreditation Council) ಯ ಗುಣಮಟ್ಟ ಪರಿಶೀಲನೆಯಲ್ಲಿ ಅವರು ಮಾತನಾಡಿದರು. ಡಾ. ರೇಮಂಡ ಯು. ವೈದ್ಯನಾಥನ್, ಡಾ. ಭದ್ರಾಚಾರಿ ವಿಜಯಲಕ್ಷ್ಮಿ ಹಾಗೂ ಡಾ. ಎಸ್. ಶ್ರೀನಿವಾಸ ಗುಣಮಟ್ಟತೆಯ ಮೌಲ್ಯಾಧಿಕಾರಿಗಳಾಗಿ ಪರಿಶೀಲನೆ ಮಾಡಿದರು.
ಅಂಗಡಿ ಶಿಕ್ಷಣ ಸಂಸ್ಥೆಯ ಚೇರಮನ್ ಮಂಗಲಾ ಅಂಗಡಿ, ನಿರ್ದೇಶಕಿಯರಾದ ಡಾ. ಸ್ಪೂರ್ತಿ ಪಾಟೀಲ, ಶ್ರದ್ಧಾ ಶೆಟ್ಟರ, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ, ಪ್ರೊ. ಅಮರ ಬ್ಯಾಕೋಡಿ, ಪ್ರೊ. ಮಲಗೌಡ ಪಾಟೀಲ, ಪ್ರೊ. ವಿಶಾಲಕೀರ್ತಿ ಪಾಟೀಲ, ಪ್ರೊ. ಗಜಾನನ ತುಡವೇಕರ, ಪ್ರೊ. ಗೌತಮ ಕಳ್ಳಿಮನಿ, ಬ್ರಿಜೇಶ ಪಾಟೀಲ, ಪ್ರಸಾದ ಪಂಚಾಕ್ಷರಿಮಠ, ಶಿವಪ್ರಸಾದ ಕಿತ್ತೂರ, ಶಂಕರ ಹಿರೇಮಠ, ಪ್ರೇಮನಾಥ ಜವಳಿ, ಗಿರೀಶ ಮಡ್ಡಿಮನಿ, ತೇಜಸ್ವಿನಿ ಸೊಬರದ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ