Belagavi NewsBelgaum NewsHealthKannada NewsKarnataka News

*ಯಳ್ಳೂರ ಕೆಎಲ್‌ಇ ಸೆಂಟಿನರಿ ಆಸ್ಪತ್ರೆಗೆ NABH ಮಾನ್ಯತೆ*

ಯಳ್ಳೂರ ಕೆಎಲ್‌ಇ ಸೆಂಟಿನರಿ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಆಸ್ಪತ್ರೆಗೆ NABH ಮಾನ್ಯತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಸೆಂಟಿನರಿ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಗುಣಮಟ್ಟದ ಆರೋಗ್ಯ ಸೇವೆ ಹಾಗೂ ರೋಗಿಗಳ ಸುರಕ್ಷತೆಗೆ ನೀಡುತ್ತಿರುವ ಆದ್ಯತೆಯ ಅಂಗವಾಗಿ ಓಂಃಊ ಮಾನ್ಯತೆಯನ್ನು ಪಡೆದುಕೊಂಡಿದೆ.

ಈ ಕುರಿತು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ನವೀನ್ ಎನ್. ಅವರು ಮಾತನಾಡಿ, ನಮ್ಮ ಆಸ್ಪತ್ರೆಯು NABH ಮಾನ್ಯತೆ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ರೋಗಿಗಳಿಗೆ ಸುರಕ್ಷಿತ, ಗುಣಮಟ್ಟದ ಹಾಗೂ ವೈಜ್ಞಾನಿಕ ಆಧಾರಿತ ವೈದ್ಯಕೀಯ ಸೇವೆಗಳನ್ನು ಒದಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ಮಾನ್ಯತೆಯು ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಗುಣಮಟ್ಟ, ರೋಗಿಗಳ ಸುರಕ್ಷತೆ ಮತ್ತು ವ್ಯವಸ್ಥಿತ ನಿರ್ವಹಣೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಎಂದು ತಿಳಿಸಿದರು.

NABH ಮಾನ್ಯತೆಯು ರೋಗಿಗಳಿಗೆ ಸುರಕ್ಷಿತ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಖಚಿತಪಡಿಸುವ ಮೂಲಕ ಪ್ರಯೋಜನಕಾರಿಯಾಗಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡುವುದು, ಸೋಂಕಿನ ಅಪಾಯವನ್ನು ಕಡಿಮೆ ಮಾಡುವುದು ಹಾಗೂ ಪ್ರಮಾಣಿತ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವುದಕ್ಕೆ ಇದು ಒತ್ತು ನೀಡುತ್ತದೆ. ಇದರಿಂದ ರೋಗಿಗಳಿಗೆ ಉತ್ತಮ ವೈದ್ಯಕೀಯ ಆರೈಕೆ, ತಮ್ಮ ಚಿಕಿತ್ಸೆಯ ಕುರಿತು ಸೂಕ್ತ ಮಾಹಿತಿ ಮತ್ತು ಸುಧಾರಿತ ಆಸ್ಪತ್ರೆ ಸೇವೆಗಳು ದೊರೆಯುತ್ತವೆ. ಅಲ್ಲದೆ, ರೋಗಿಗಳ ಸುರಕ್ಷತೆ ಮತ್ತು ತೃಪ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.

ನಮ್ಮ ಆಸ್ಪತ್ರೆಯು ೨೪/೭ ತುರ್ತು ಚಿಕಿತ್ಸಾ ಸೇವೆ, ಐಸಿಯು, ಡಯಾಲಿಸಿಸ್, ಪುನರ್ವಸತಿ ಸೇವೆಗಳು, ಲ್ಯಾಪರೊಸ್ಕೋಪಿಕ್ ಮತ್ತು ಲೇಸರ್ ಶಸ್ತ್ರಚಿಕಿತ್ಸೆಗಳು, ಸೊಂಟ ಮತ್ತು ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಗಳು, ಮೂತ್ರಪಿಂಡ ಕಸಿ, ಮೂತ್ರಶಾಸ್ತ್ರ ಚಿಕಿತ್ಸೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಮಕ್ಕಳ ಆರೈಕೆ, ಬಂಜೆತನ ನಿವಾರಣಾ ಚಿಕಿತ್ಸೆ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ಸೇವೆಗಳು ಸೇರಿದಂತೆ ಗರ್ಭಾವಸ್ಥೆಯ ಆರೈಕೆ ಮತ್ತು ಹೆರಿಗೆ ಸೇವೆಗಳನ್ನು ಒದಗಿಸುತ್ತದೆ. ಇದರ ಜೊತೆಗೆ, ೨೪/೭ ಪ್ರಯೋಗಾಲಯ ಮತ್ತು ರೇಡಿಯಾಲಜಿ ಸೇವೆಗಳನ್ನೂ ಒದಗಿಸಲಾಗುತ್ತಿದೆ. ಗುಣಮಟ್ಟದ ವೈದ್ಯಕೀಯ ಸೇವೆ ಮತ್ತು ಕಾಳಜಿಯುತ ರೋಗಿ ಆರೈಕೆಗೆ ನಮ್ಮ ಆಸ್ಪತ್ರೆ ಬದ್ಧವಾಗಿದೆ.

ನಮ್ಮ ಆಸ್ಪತ್ರೆಯಲ್ಲಿ ವಿವಿಧ ಸರ್ಕಾರಿ ಆರೋಗ್ಯ ಯೋಜನೆಗಳು ಹಾಗೂ ಖಾಸಗಿ ಆರೋಗ್ಯ ವಿಮಾ ಯೋಜನೆಗಳ ಅಡಿಯಲ್ಲಿ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಅರ್ಹ ರೋಗಿಗಳಿಗೆ ಆರ್ಥಿಕ ನೆರವು ದೊರೆಯುವುದರ ಜೊತೆಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಅನುಕೂಲವಾಗುತ್ತಿದೆ.

ಈ ಸಾಧನೆಗೆ ಸಹಕರಿಸಿದ ವೈದ್ಯರು, ನಸಿಂಗ್ ಸಿಬ್ಬಂದಿ, ಆಡಳಿತ ವಿಭಾಗ ಹಾಗೂ ಎಲ್ಲಾ ಸಿಬ್ಬಂದಿಯ ಪರಿಶ್ರಮವನ್ನು ಶ್ಲಾಘಿಸಿದ ಅಔಔ ಶ್ರೀ ನವೀನ್ ಎನ್. ಅವರು, ಮುಂದಿನ ದಿನಗಳಲ್ಲಿಯೂ ರೋಗಿಗಳ ಸುರಕ್ಷತೆ, ಗುಣಮಟ್ಟದ ಚಿಕಿತ್ಸೆ ಮತ್ತು ಸೇವಾ ಸುಧಾರಣೆಗೆ ಆಸ್ಪತ್ರೆ ಬದ್ಧವಾಗಿರಲಿದೆ ಎಂದು ತಿಳಿಸಿದರು.

ಈ ಮೈಲಿಗಲ್ಲನ್ನು USM KLE IMP ನಿರ್ದೇಶಕರಾದ ಡಾ.ಎಚ್.ಬಿ. ರಾಜಶೇಖರ್ ಅವರ ಮಾರ್ಗದರ್ಶನದಲ್ಲಿ ಸಾಧಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button