ಪ್ರಗತಿವಾಹಿನಿ ಸುದ್ದಿ; ನಾಗಲ್ಯಾಂಡ್; ಉಗ್ರರೆಂದು ತಪ್ಪು ಭಾವಿಸಿ 13 ನಾಗರಿಕರನ್ನು ಹತ್ಯೆ ಮಾಡಿದ ಓರ್ವ ಸೇನಾಧಿಕಾರಿ ಹಾಗೂ 29 ಸೈನಿಕರ ವಿರುದ್ಧ ಎಸ್ ಐಟಿ ಚಾರ್ಜ್ ಶೀಟ್ ಸಲ್ಲಿಸಿದೆ.
ಸೋಮ ಜಿಲ್ಲೆಯಲ್ಲಿ 2021 ಡಿಸೆಂಬರ್ 4ರಂದು ಭಾರತೀಯ ಸೈನಿಕರು ಉಗ್ರಗಾಮಿಗಳೆಂದು ತಪ್ಪು ಭಾವಿಸಿ 13 ನಾಗರಿಕರನ್ನು ಹತ್ಯೆ ಮಾಡಿದ್ದರು. ಪ್ರಕರಣದ ತನಿಖೆಗಾಗಿ ನಾಗಾಲ್ಯಾಂಡ್ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿತ್ತು. ತನಿಖೆ ಕೈಗೆತ್ತಿಕೊಂಡ ಎಸ್ ಐಟಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ದಾಳಿ ವೇಳೆ ಸೇನೆ ಪ್ರಾಮಾಣಿಕ ಕಾರ್ಯಾಚರಣೆ ವಿಧಾನಗಳು ಹಾಗೂ ಸೂಕ್ತ ನಿಯಮಗಳನ್ನು ಅನುಸರಿಸಿಲ್ಲ ಎಂದು ಎಸ್ ಐಟಿ ಆರೋಪಿಸಿದೆ.
ಮ್ಯಾನ್ಮಾರ್ ಗಡಿಯಲ್ಲಿನ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದ ನಿವಾಸಿಗಳು ಕಲ್ಲಿದ್ದಲು ಗಣಿ ಕೆಲಸ ಮುಗಿಸಿ ವ್ಯಾನ್ ವೊಂದರಲ್ಲಿ ಮನೆಗೆ ವಾಪಸ್ ಆಗುತ್ತಿದ್ದಾಗ ಪ್ಯಾರಾ ವಿಶೇಷ ಪಡೆಗಳು ಗುಂಡಿನ ದಾಳಿ ನಡೆಸಿತ್ತು. ಈ ವೇಳೆ 13 ನಾಗರಿಕರು ಮೃತಪಟ್ಟಿದ್ದರು. ಭದ್ರತಾ ಪಡೆಗಳ ಎಡವಟ್ಟಿನಿಂದಾಗಿ 13 ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಪ್ರಕರಣ ಸಂಬಂಧ ಇದೀಗ 30 ಸೈನಿಕರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಅಣ್ಣನ ಸಾವು; ಅತ್ತಿಗೆಯನ್ನೇ ವಿವಾಹವಾದ ತಮ್ಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ