ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಮಾಡಿದ ಟ್ವೀಟ್ ಭಾರೀ ಅಪಹಾಸ್ಯಕ್ಕೀಡಾಗಿದ್ದಲ್ಲದೆ, ಬಿಜೆಪಿಗೆ ತೀವ್ರ ಮುಜುಗರವನ್ನುಟು ಮಾಡಿದೆ.
ತಿರುಪತಿ ಲಡ್ಡಿಗೆ ನಂದಿನಿ ತುಪ್ಪವಿಲ್ಲ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಅದರ ತಲೆ ಬರಹ ನೋಡಿದವರೇ ಕಟೀಲು ಕಾಂಗ್ರೆಸ್ ಸರಕಾರದ ವಿರುದ್ಧ ಟ್ವೀಟ್ ಮಾಡಿಬಿಟ್ಟರು.
”ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರದಲ್ಲಿ ಅಸಡ್ಡೆ ತೋರುವ @INCKarnataka ನೀತಿಯಿಂದಾಗಿ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತಗೊಂಡಿದೆ. ತಿರುಪತಿಯೊಂದಿಗಿನ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದ್ದು, ಹಿಂದೂಗಳೆಡಗಿನ @siddaramaiah ಅವರ ತಾತ್ಸಾರ ನೀತಿ ರುಜುವಾತಾಗಿದೆ” ಎಂದು ಟ್ವೀಟ್ ಮಾಡಿದರು.
ಆದರೆ, ತಿರುಪತಿಗೆ ನಂದಿನಿ ಪೂರೈಕೆ 18 ತಿಂಗಳ ಹಿಂದೆಯೇ, ಬಿಜೆಪಿ ಸರಕಾರದ ಕಾಲದಲ್ಲೇ ಸ್ಥಗಿತವಾಗಿದೆ ಎನ್ನುವ ವಿವರಣೆಯನ್ನು ಅವರು ಗಮನಿಸಿದಂತಿಲ್ಲ!
ಕಟೀಲು ಟ್ವೀಟ್ ಮಾಡುತ್ತಿದ್ದಂತೆ ಸಾವಿರಾರು ಜನರು ಮುಗಿಬಿದ್ದರು. ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕಂಡರು. ವಿಶೇಷವೆಂದರೆ ಯಾರೋಬ್ಬರೂ ಕಟೀಲು ಪರವಾಗಿ ಟ್ವೀಟ್ ಮಾಡಲಿಲ್ಲ. ತಮ್ಮ ತಪ್ಪಿನ ಅರಿವಾದ ನಂತರ (ಆಗಿದ್ದರೆ) ಟ್ವೀಟ್ ಡಿಲೀಟ್ ಮಾಡುವ ಅಥವಾ ತಿದ್ದುಪಡಿ ಮಾಡುವ ಕೆಲಸ ಮಾಡಬಹುದಿತ್ತು. ರಾಷ್ಟ್ರಮಟ್ಟದ ರಾಜಕೀಯ ಪಕ್ಷದ ಅಧ್ಯಕ್ಷ, ಸಂಸದ ಇಂತಹ ಅಸಂಬದ್ಧ ಟ್ವೀಟ್ ಮಾಡಿದ್ದರಿಂದಾಗಿ ಬಿಜೆಪಿಗೂ ಮುಜುಗರವುಂಟಾಗುವಂತಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಫೇಸ್ ಬುಕ್ ನಲ್ಲಿ ಸರಿಯಾಗಿ ಝಾಡಿಸಿದರು.
”ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.
ಮಾನ್ಯ ಸಂಸದ Nalin Kumar Kateel ಅವರೇ ಈಗ ಹೇಳಿ, ಹಿಂದೆ ಅಧಿಕಾರದಲ್ಲಿದ್ದ BJP Karnataka ಸರ್ಕಾರ ಹಿಂದೂ ಧಾರ್ಮಿಕ ಶ್ರದ್ಧಾ ಭಕ್ತಿಯ ವಿರೋಧಿಯೋ? ಅಥವಾ ಮುಖ್ಯಮಂತ್ರಿಯಾಗಿದ್ದ Basavaraj Bommai ಅವರು ಮಾತ್ರ ಹಿಂದೂ ವಿರೋಧಿಯೋ?
ನಮಗೆ ಜನರ ಧಾರ್ಮಿಕ ನಂಬಿಕೆಯ ಜೊತೆಗೆ ಹೈನುಗಾರರ ಬದುಕು ಮುಖ್ಯ. ಹೀಗಾಗಿ ನಾಡಿನ ರೈತರ ಹಿತದೃಷ್ಟಿಯಿಂದ ನಾವು ಕೇಳುವ ದರ ನೀಡಲು ತಿರುಪತಿ ದೇವಾಲಯದವರು ಒಪ್ಪುವುದಾದರೆ ತುಪ್ಪ ಪೂರೈಸಲು ನಮಗೆ ಯಾವ ಸಮಸ್ಯೆಗಳಿಲ್ಲ” ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಕಟೀಲ್ ಸರ್!ತಾವು ಒರ್ವ ಜನಪ್ರತಿನಿಧಿ ಆಗಿ ಜವಾಬ್ದಾರಿಯುತವಾಗಿ ಟ್ವೀಟ್ ಮಾಡ್ತಿಲ್ಲ!!ಅಥವಾ ನಿಮ್ಮ ಅಡ್ಮಿನ್ ಆ standard ಕಾಪಾಡ್ತಾ ಇಲ್ಲ!!ಅಂದ್ರೆ ಸರಿಯಾದ ಮಾಹಿತಿಗಳ ಅರಿವಿಲ್ಲದಂತೆ,ತಕ್ಷಣ ಹೆಡ್ ಲೈನ್ಗಳ ಮೇಲೆ ಕಮೆಂಟ್ ಮಾಡಿ ಅಪಹಾಸ್ಯಕ್ಕಿಡಾಗಬೇಡಿ! ಎಂದು ಓರ್ವರು ತಿವಿದರು.
ಒಂದು ವರ್ಷದ ಹಿಂದೆ ಸಿದ್ದರಾಮಯ್ಯ ನವರ ಸರ್ಕಾರ ಇತ್ತಾ? ಇಲ್ಲಾ ನಿನ್ನ ಲವ್ ಜಿಹಾದಿ ಲದ್ದಿ ಪಸರಿಸಿತ್ತಾ! ರಾಜಕೀಯದಲ್ಲಿ ಅ ಆ ಇ ಈ ತಿಳಿಯದ ನಿನ್ನಂಥಾ ಕುಲಂಗಿಗಳ ಕೈಯಲ್ಲಿ ರಾಜ್ಯ ಆಡಳಿತ ಸಿಕ್ಕಿದ್ದು ನಿಜಕ್ಕೂ ಶೋಚನೀಯ! ಎಂದು ಮತ್ತೋಬ್ಬರು ವ್ಯಂಗ್ಯವಾಡಿದ್ದಾರೆ.
ಅಲ್ರಪ್ಪ ನಿಮ್ಮ ಸರ್ಕಾರದಲ್ಲೇ ಆಗಿದ್ದು ನಿಮಗೇ ಗೊತ್ತಿಲ್ವಾ? Atleast tweet ಮಾಡುವಾಗ ಆದ್ರೂ ನೋಡಿಕೊಂಡು ಮಾಡ್ರಿ.. ಎಂದಿದ್ದಾರೆ ಇನ್ನೋಬ್ಬರು.
ಕೆಲವು ಸ್ಯಾಂಪಲ್ ಟ್ವೀಟ್ ಗಳು ಇಲ್ಲಿವೆ –
- ಲೋ ಸಗಣಿ ತಿನ್ನೋ ಮಂಕ್ ದಿಣ್ಣೆ ಕಳೆದ ಒಂದೂವರೆ ವರ್ಷದ ಹಿಂದೆಯೇ @BJP4Karnataka ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.
- ನಿಜವಾದ ಹಿಂದೂಗಳ ವಿರೋಧಿ ನೀವುಗಳು
- ನಂದಿನಿ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡುವುದನ್ನು ನಿಲ್ಲಿಸಿ ಒಂದೂವರೆ ವರ್ಷವಾಗಿದೆ, ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಕ್ರಮ ಕೈಗೊಳ್ಳಲಾಗಿತ್ತು, ಬಿಜೆಪಿಗೆ ತಿರುಪತಿ ತಿಮ್ಮಪ್ಪನ ಮೇಲೆ ಗೌರವ, ಭಕ್ತಿ ಇರಲಿಲ್ಲವೇಕೆ? ತಿಮ್ಮಪ್ಪನಿಗೆ ತುಪ್ಪ ಕೊಡದ ಬಿಜೆಪಿ ಹಿಂದೂ ವಿರೋಧಿ ಅಲ್ಲವೇ? @BJP4Karnataka ನಾಯಕರು ಉತ್ತರಿಸುವರೆ?
- ನಂದಿನಿ ತುಪ್ಪ ಸರಬರಾಜು ನೀತಿದ್ದು ಬೊಮ್ಮಾಯ್ ಮಾಮಾ ಸರ್ಕಾರದ ಅವಧಿಯಲ್ಲಿ, ಸುಳ್ಳು ಸುದ್ದಿ ಹರಡಬೇಡಿ ಹಾಗೂ ಪ್ರತಿಯೊಂದಕ್ಕೂ ಧರ್ಮವನ್ನು ಲಿಂಕ್ ಮಾಡುತ್ತಿರಾ ಮತ್ತೆ
- ಮಾನ ಮರ್ಯಾದೆ ಏನಾದರೂ ಇದ್ಯಾ ನಿನಗೆ @nalinkateel 2021 ರಲ್ಲಿಯೇ ನಂದಿನಿ ತುಪ್ಪದ ಸರಬರಾಜು ನಿಂತಿದೆ ಅದಕ್ಕೆ ಬೇಕಾದ ಎಲ್ಲ ರೀತಿಯ ಪ್ರತಿಕ್ರಿಯೆಗಳು ಮುಗಿದಿವೆ ನೀನು ಹೀಗೆನೇ ಸುಳ್ಳಿನ ಸರಮಾಲೆಯೇನ್ನೇ ಸೃಷ್ಟಿಸುತ್ತ ಇರಬೇಕು ಅದಕ್ಕೆ ದಾಖಲೆ ಸಮೇತ ಪ್ರತಿಕ್ರಿಯೆ ಕೊಡ್ತಾ ಇರ್ತೀವಿ
- ನಾಚಿಕೆ ಆಗಬೇಕು ನಿಮ್ಮ ಬೇಜವಾಬ್ದಾರಿ ಮಾತಿಗೆ….
- ಎಲ್ಲಿಂದ ಬರ್ತೀರಾ ನೀವೆಲ್ಲ ಥೂ
- ಸುಳ್ಳಿಗೆ ಒಂದು ಮಿತಿ ಇದೆ ಸರ್… ನೀವು ಹೇಳೋ ಪ್ರಕಾರ ಭಕ್ತಿಯ ವಿಚಾರದಲ್ಲಿ ರಾಜಕೀಯ ಮತ್ತು ವ್ಯವಹಾರ ನಡೆಸಿರುವುದು ನಿಮ್ಮ ಸರ್ಕಾರವಿದ್ದ ಸಮಯದಲ್ಲೇ.?
- ಅಣ್ಣಾ ಇನ್ನೂ ನಿದ್ದೆಯಿಂದ ಎದ್ದಿಲ್ವಾ…….
- ಕಳೆದ ಒಂದೂವರೆ ವರ್ಷದಿಂದನೇ ನಿಮ್ಮ ಸರ್ಕಾರದಲ್ಲೇ ಸ್ಥಗಿತವಾಗಿದೆ ಬಾ ಕಟೀಲ್ ಆಣೆ ಮಾಡು ಧಮ್ಮು ತಾಕತ್ತು ಇದ್ದರೆ?
- ನೀನು ಸಂಸದ ಆಗೊದಿರಲಿ ಸಂಸಾರಿ ಆಗೋಕು ನಾಲಾಯಕ್ ನನ್…… ವಿಷಯ ಗೊತ್ತಿದ್ರೆ ಮಾತಾಡು ಇಲ್ಲ ಅಮಿಕಂಡ್ ಈರು ಮರ್ಯಾದೆ ಹುಳಿಯುತ್ತೆ.
- ನೀವೆಲ್ಲ ಸಂಸದ ಭವನಕ್ಕೆ ಕಳಂಕ
- ಗುಲ್ಡೂ ತರಾ ಮಾತಾಡ್ಬೇಡ, ಟಿಟಿಡಿ ಗೆ ಬಿಜೆಪಿ ಸರ್ಕಾರ ಇದ್ದಾಗ್ಲಿಂದಾನೆ ತುಪ್ಪ ಸರಬರಾಜು ಮಾಡೋದು ನಿಂತಿತ್ತಂತೆ.. ಸತ್ಯ ತಿಳ್ಕೊಂಡ್ ಮಾತಾಡು ಮೊದ್ಲು
- Ond vichara ಸಿಕ್ಕಿದ್ರೆ ಸಾಕು ಸುಳ್ಳು ಪ್ರಚಾರ ಮಾಡೋದ್ರಲ್ಲಿ ಬಿಜೆಪಿ ರಾಜಕಾರಣಿ and ಕಾರ್ಯಕರ್ತರು ಮೊದ್ಲು ಇರ್ತಾರೆ….news nodro sariyagi TTD president en ಹೇಳಿದ್ದಾರೆ ಅನ್ನೋದು
- ಅಲ್ರಪ್ಪ ನಿಮ್ಮ ಸರ್ಕಾರದಲ್ಲೇ ಆಗಿದ್ದು ನಿಮಗೇ ಗೊತ್ತಿಲ್ವಾ? Atleast tweet ಮಾಡುವಾಗ ಆದ್ರೂ ನೋಡಿಕೊಂಡು ಮಾಡ್ರಿ..
- Tender ಪ್ರಕ್ರಿಯಗೂ ದೇವರ ಬಗ್ಗೆ ಭಕ್ತಿಗೂ ಏನು ಸಂಬಂಧ? ರೈತ ಕಾಳಜಿ ಇಲ್ಲದ ನಿಮ್ಮ ಮನದ ದುಸ್ಥಿತಿ ಯಾರಿಗೂ ಬೇಡ. ಸಧ್ಯ ನಿಮ್ಮಂಥ ಮಹಾನುಭಾವ ನಮಗೆ ಮಂತ್ರಿ ಆಗಲಿಲ್ಲ ಎನ್ನುವುದು ಸಂತೋಷದ ವಿಚಾರ
- ಅಯ್ಯೊ ಪೆಕರ ಇದನ್ನ ನೋಡು ಯಾವಾಗ ತುಪ್ಪ ನಿಲ್ಲಿಸಿದ್ದಾರೆ ಹಾಗೂ ಯಾವ ಬೇವಾರ್ಷಿಗಳು ಅಧಿಕಾರದಲ್ಲಿ ಇದ್ದರು ಅಂತ ತಿಳ್ಕೊಂಡು ಆಮೆಲ್ ಟ್ವೀಟ್ ಮಾಡು.ಲೇಯ್ ಜೋಕರ್,ನಮ್ಮ ಜಿಲ್ಲೆಗೇ ನಿ ಒಂದು ಕಳಂಕ ಮರ್ರೆ, ಕರ್ಮ!!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ