Latest

*ಈ ಬಾರಿ ಚುನಾವಣೆಯಲ್ಲಿ ಬಂಡೆ ಒಡೆಯತ್ತೆ, ಹುಲಿಯಾ ಕಾಡಿಗೆ ಹೋಗುತ್ತೆ; ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯಗೆ ಟಾಂಗ್ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ*

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ವಿಧನಸಭೆ ಚುನಾವಣೆಯಲ್ಲಿ ಈಬಾರಿ ಬಂಡೆ ಒಡೆದು ಹೋಗುತ್ತೆ, ಹುಲಿಯಾ ಕಾಡಿಗೆ ಹೋಗುತ್ತೆ ರಾಜ್ಯದಲ್ಲಿ ಮತ್ತೆ ಕಮಲ ಅರಳುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ಕೊಪ್ಪಳದಲ್ಲಿ ಜನಸಂಕಲಪ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷರು, ಕಾಂಗ್ರೆಸ್ ನಾಯಕ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಕತ್ತೆ ಕಥೆ ಹೇಳುವ ಮೂಲಕ ಕಾಂಗ್ರೆಸ್ ನಾಯಕರ ಟೀಕಿಸಿದ್ದಾರೆ.

ಒಂದು ದಿನ ಸೋನಿಯಾ ಗಾಂಧಿ ಮನೆ ಮುಂದೆ ಕತ್ತೆ ಮಲಗಿತ್ತು. ಅದನ್ನು ಮಲ್ಲಿಕಾರ್ಜುನ ಖರ್ಗೆ, ಅಜಾದ್ ಸೇರಿದಂತೆ ಯಾರಿಂದಲೂ ಓಡಿಸಲು ಆಗಿಲ್ಲ. ಆಗ ಸಿದ್ದರಾಮಯ್ಯ ಬಂದರು. ಸಿದ್ದರಾಮಯ್ಯ ಕತ್ತೆಗೆ ಕಾಂಗ್ರೆಸ್ ಗೆ ಸೇರ್ತಿಯಾ ಎಂದು ಕೇಳಿದರು. ಕಾಮ್ಗ್ರೆಸ್ ಸೇರ್ತಿಯಾ ಎಂದು ಕೇಳುತ್ತಿದ್ದಂತೆ ಕತ್ತೆ ಓಡಿ ಹೋಯ್ತು. ಕತ್ತೆಗೂ ಕೂಡ ಕಾಂಗ್ರೆಸ್ ಬೇಡವಾಗಿದೆ ಎಂದು ಲೇವಡಿ ಮಾಡಿದರು.

ಈ ಹಿಂದೆ ಕಾಂಗ್ರೆಸ್ ನಲ್ಲಿ ವಿದ್ಯುತ್ ಕಂಬ ನಿಲ್ಲಿಸಿದ್ರೂ ಗೆಲ್ಲುತ್ತಿತ್ತು. ಈಗ ಕ್ಷೇತ್ರ ಇಲ್ಲದೇ ರಾಹುಲ್ ಗಾಂಧಿ ಕೇರಳಕ್ಕೆ ಹೋಗಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರಿಗೆ ಕ್ಷೇತ್ರ ಇಲ್ಲ, ಆದರೂ ಸಿದ್ದರಾಮಯ್ಯ ಈಗಾಗಲೇ ಮುಖ್ಯಮಂತ್ರಿ ಶರ್ಟ್ ಹೊಲಿಸಿ ಇಟ್ಟಿದ್ದಾರೆ. ಆದ್ರೆ ನನ್ನಪ್ಪನಾಣೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲ್ಲ ಎಂದರು.

ಸಿದ್ದರಾಮಯ್ಯ ದೇವೇಗೌಡರ ಬಳಿ ಬೆಳೆದು ಅವರನ್ನೇ ತುಳಿದುವರು, ನಂತರ ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆದರು. ನನ್ನನ್ನೇ ಜೋಕರ್ ಅಂತಿರಾ? ನೀವು ಬ್ರೋಕರ್… ನೀವು ಬ್ರೋಕರ್ ಆಗಿಯೇ ಮುಖ್ಯಮಂತ್ರಿ ಆಗಿದ್ದು ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ನಳೀನ್ ಕುಮಾರ್ ಕಟೀಲ್, ಡಿ.ಕೆ.ಶಿವಕುಮಾರ್ ಗೆ ಎರಡು ಕುಕ್ಕರ್ ಮೇಲೆ ತುಂಬಾ ಪ್ರೀತಿ. ಒಂದು ಮಂಗಳೂರು ಕುಕ್ಕರ್, ಇನ್ನೊಂದು ಬೆಳಗಾವಿ ಕುಕ್ಕರ್. ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟಿಸಿದವನನ್ನು ಅಮಾಯಕ ಅಂತಿದ್ದಾರೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಕುಟುಂಬ ಕಳ್ಳರ ಸಂತಾನ. ಡಿಕೆಶಿ ತಿಹಾರ್ ಜೈಲಿಗೆ ಹೋಗಿದ್ದು ಯಾಕೆ? ಎಂತಾ ಸಂತಾನ ರೀ ಇವರದ್ದು ಕಳ್ಳರ ಸಂತಾನ ಎಂದು ಹೇಳಿಕೆ ನೀಡಿದ್ದಾರೆ.

*ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಬ್ಯಾಡ್ ಕೇಸ್ ನ ಗುಡ್ ಲಾಯರ್ ಎಂದ ಸಿದ್ದರಾಮಯ್ಯ*

https://pragati.taskdun.com/siddaramaiahj-c-madhuswamyvidhanasabhekarnataka-budget-session/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button