ಸಿದ್ದಾರೂಢ ಮಠಕ್ಕೆ ನಳೀನ್ ಕುಮಾರ ಕಟೀಲ್ ಭೇಟಿ

ಸಿದ್ದಾರೂಢ ಮಠಕ್ಕೆ ನಳೀನ್ ಕುಮಾರ ಕಟೀಲ್ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

 ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಇಂದು ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ  ಭೇಟಿ ನೀಡಿದ್ದರು.
 ಸಿದ್ಧಾರೂಢರು ಹಾಗೂ ಗುರುನಾಥಾರೂಢರ ಗದ್ದುಗೆಗೆ ದರ್ಶನವನ್ನು ಪಡೆದ ಕಟೀಲು ಅವರನ್ನು ಮಠದಿಂದ ಅವರನ್ನು ಸತ್ಕರಿಸಲಾಯಿತು.
 ನೂತನವಾಗಿ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ  ಮಹೇಶ್ ಟೆಂಗಿನಕಾಯಿ ಅವರನ್ನು ಹಾಗೂ ಶಾಸಕ ಅರವಿಂದ ಬೆಲ್ಲದ ಅವರನ್ನು ಸಹ ಇದೇ ವೇಳೆ  ಟ್ರಸ್ಟ್ ಕಮಿಟಿಯು ಸತ್ಕರಿಸಿತು.
  ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿಡಿ ಮಾಳಗಿ, ಧರ್ಮದರ್ಶಿಗಳಾದ ಹನುಮಂತ ಕೊಟಬಾಗಿ, ಮಹೇಶ್ ಹನಗೋಡಿ, ವಿಜಯಲಕ್ಷ್ಮಿ ಪಾಟೀಲ್, ಜಗದೀಶ್ ಮಜಿಗುಂಡಿ ಈ ಸಂದರ್ಭದಲ್ಲಿದ್ದರು.

Related Articles

Back to top button