ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿಯಮ ಉಲ್ಲಂಘನೆ ಮಾಡಿ ನಮ್ಮ ಮೆಟ್ರೋದಲ್ಲಿ ಆಹಾರ ಸೇವಿಸಿದ ಪ್ರಯಣಿಕನ ವಿರುದ್ಧ ಬಿಎಂಆರ್ ಸಿಎಲ್ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದೆ.
ಎಂದಿನಂತೆ ನಮ್ಮ ಮೆಟ್ರೋ ಹತ್ತಿ ಕಚೇರಿಗೆ ತೆರಳುತ್ತಿದ್ದ ಪ್ರಯಾಣಿಕ ಮೆಟ್ರೋದಲ್ಲಿ ಕುಳಿತು ತಿಂಡಿ ತಿಂದಿದ್ದಾನೆ. ಸಹ ಪ್ರಯಾಣಿಕರು ಹಾಗೂ ಆತನ ಸ್ನೇಹಿತರು ಮೆಟ್ರೋ ಒಳಗಡೆ ಆಹಾರ ಸೇವಿಸುವಂತಿಲ್ಲ ಎಂದು ಎಚ್ಚರಿಸಿದರೂ ನಿರ್ಲಕ್ಷ ವಹಿಸಿದ್ದ ಪ್ರಯಾಣಿಕ ಆರಾಮವಾಗಿ ಆಹಾರ ತಿಂದಿದ್ದಾನೆ. ಈ ವಿಡಿಯೋ ಮೆಟ್ರೋ ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೆರೋ ನಿಯಮ ಉಲ್ಲಂಘನೆ ಮಾಡಿ ಬೇಜವಾಬ್ದಾರಿಯಿಂದ ನಡೆದುಕೊಂಡ ಪ್ರಯಾಣಿಕನ ವಿರುದ್ಧ ಬಿಎಂಆರ್ ಸಿ ಎಲ್ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದೆ. ಅಲ್ಲದೇ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 500 ರೂಪಾಯಿ ದಂಡ ವಸೂಲಿ ಮಾಡಿದೆ.
ಪ್ರಯಾಣಿಕನನ್ನು ಪತ್ತೆ ಮಾಡಿದ ಪೊಲಿಸರಿಗೆ ಪ್ರಾಣಿಕ ಇಂತಹ ಘಟನೆ ಮತ್ತೆ ಮರುಕಳಿಸಲ್ಲ, ತಪ್ಪಾಗಿದ್ದಾಗಿ ತಿಳಿಸಿದ್ದಾನೆ. ಮೆಟ್ರೋ ಸೇವೆ ಬಳಸುವಾಗ ಅನುಸರಿಸಬೇಕಾದ ಶಿಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನಿಯಮ ಉಲ್ಲಂಘನೆ ಮಾಡಿ ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳಬೇಡಿ ಎಂದು ಮೆಟ್ರೋ ಪ್ರಯಾಣಿಕರಲ್ಲಿ ಮನವಿ ಮಾಡುತ್ತಿರುವುದಾಗಿ ಮೆಟ್ರೋ ಸಿಬ್ಬಂದಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ