
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಅವರು ಇಂದು ನಂದಗಡ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ನಂದಗಡ ಖಾನಾಪುರ ಜಾತ್ರಾ ಸಮಿತಿ ಪ್ರಶಾಂತ ಲಕ್ಕೆಬೈಲಕರ, ಪುಂಡಲೀಕ ಕರಳಗೇಕರ, ಸುಬಾಷ ಪಾಟೀಲ, ಜಾತ್ರಾ ಸಮಿತಿ ಅಧ್ಯಕ್ಷ ಡಾ.ಸರ್ನೋಬತ್ ಸ್ವಾಗತಿಸಿದರು.
ಡಾ.ಸೋನಾಲಿ ಅವರನ್ನು ಸಮಿತಿಯ ಸದಸ್ಯರು ಸನ್ಮಾನಿಸಿದರು. ಗೀತಾಂಜಲಿ ಚೌಗುಲೆ, ಕಾಂಚನ್ ಚೌಗುಲೆ, ದೀಪಾಲಿ ಮಲ್ಕಾರಿ, ಆಶಾರಾಣಿ ನಿಂಬಾಳ್ಕರ್, ನಮ್ರತಾ ಹುಂಡಾರೆ, ಜೀಜಾ ರಾಠೋಳೆ, ರಾಜಶ್ರೀ ಅಜಗಾಂವಕರ ಉಪಸ್ಥಿತರಿದ್ದರು.