Kannada NewsKarnataka NewsLatest

ಕೇರಳ ರಾಜ್ಯದಲ್ಲಿ ನಂದಿನಿ ಹಾಲಿನ ಡೇರಿ ವಿಸ್ತರಣೆ ಸ್ಥಗಿತ

ಪ್ರಗತಿವಾಹಿನಿ ಸುದ್ದಿ, ತಿರುವನಂತನಪುರಂ: ಕರ್ನಾಟಕದಲ್ಲಿ ಅಮೂಲ್ ಹಾಲಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಾದರಿಯಲ್ಲೇ ಕೇರಳದಲ್ಲಿ ನಂದಿನಿ ಹಾಲಿನ ಮಾರಾಟಕ್ಕೆ ಅಪಶೃತಿ ಮೊಳಗಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ನಂದಿನಿ ಡೇರಿಗಳ ವಿಸ್ತರಣೆ ಸ್ಥಗಿತಗೊಳಿಸಲಾಗಿದೆ.

ಈ ಹಿಂದೆ ಕೇರಳದಲ್ಲಿ ನಂದಿನಿ ಹಾಲಿನ ಡೇರಿಗಳ ವಿಸ್ತರಣೆ ಮಾಡದಂತೆ ಕೇರಳ ಸರಕಾರ ಆದೇಶ ಹೊರಡಿಸಿತ್ತು. ಇದು ಉಭಯ ರಾಜ್ಯಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿತ್ತು. ಆದರೆ ಇದೀಗ ಮತ್ತೆ ತನ್ನ ನೀತಿ ಮುಂದುವರಿಸಿರುವ ಕೇರಳ ಸರಕಾರ ಕೆಎಂಎಫ್ ಸಿಇಒ ಜತೆ ಮಾತುಕತೆ ನಡೆಸಿ ರಾಜ್ಯದಲ್ಲಿ ನಂದಿನಿ ಹಾಲಿನ ಡೇರಿ ವಿಸ್ತರಣೆ ನಿಲ್ಲಿಸಲು ಹೇಳಿದೆ.

 ಸದ್ಯಕ್ಕೆ ಕೇರಳ ರಾಜ್ಯದಲ್ಲಿ ನಂದಿನಿ ಹೊಸ ಮಳಿಗೆಗಳನ್ನು ತೆರೆಯುವುದಿಲ್ಲ ಎಂದು ಕೆಎಂಎಫ್ ಸಿಇಒ ಹೇಳಿದ್ದು, ಈ ನಿರ್ಧಾರವನ್ನು ಕೇರಳದ ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಹಾಲು ಸಹಕಾರಿಗಳ ಸಚಿವ ಜೆ ಚಿಂಚುರಾಣಿ ಸ್ವಾಗತಿಸಿದ್ದಾರೆ.

ಕೇರಳ ರಾಜ್ಯದಲ್ಲಿ, ಅದರಲ್ಲೂ ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ನಂದಿನಿ ಹಾಲು ಹಾಗೂ ಉತ್ಪಾದನೆಗಳ ಮಾರಾಟ ವ್ಯಾಪಕವಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button