*ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಕಾಮಗಾರಿಗೆ ಚಾಲನೆ ನೀಡಿದ ನರೇಂದ್ರ ಮೋದಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೇಟ್ರೋ ಹಳದಿ ಮಾರ್ಗ ಉದ್ಘಾಟನೆ ಮಾಡಿ, ಬೆಂಗಳೂರು- ಬೆಳಗಾವಿ ನಡುವಿನ ವಂದೇ ಭಾರತ ರೈಲಿಗೆ ಚಾಲನೆ ನೀಡಿದರು. ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಮೇಟ್ರೋ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಐಐಟಿ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿಂದಲೇ ಮೆಟ್ರೋ ಕಿತ್ತಳೆ ಮಾರ್ಗದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಕೆಂಪಾಪುರ- ಜೆಪಿನಗರ ನಾಲ್ಕನೇ ಹಂತವು ಮೊದಲ ಕಾರಿಡಾರ್ ಆಗಿದ್ದು ಹೊಸಹಳ್ಳಿ -ಕಡಬಗೆರೆ ಮಾರ್ಗವು ಎರಡನೇ ಹಂತದ ಕಾರಿಡಾರ್ ಆಗಿದೆ. ಮೊಲದ ಕಾರಿಡಾರ್ ಮೂರು ಪ್ಯಾಕೇಜ್ ಗಳಲ್ಲಿ ಹಾಗೂ ಎರಡನೇ ಕಾರಿಡಾರ್ ನಾಲ್ಕು ಪ್ಯಾಕೇಜ್ ಗಳಲ್ಲಿ ನಿರ್ಮಿಸಲ್ಪಡಲಿವೆ.
ಕೆಂಪಾಪುರ- ಜೆಪಿನಗರ ಮಾರ್ಗದ ಈ ಯೋಜನೆಯು ಕೆಂಪಾಪುರ, ಹೆಬ್ಬಾಳ, ನಾಗಶೆಟ್ಟಿಹಳ್ಳಿ, ಬಿಇಎಲ್ ಸರ್ಕಲ್, ಮುತ್ಯಾಲನಗರ, ಪೀಣ್ಯ ಕಂಠೀರವನಗರ, ಸ್ವಾತಂತ್ರ್ಯ ಯೋಧರ ಕಾಲನಿ, ಚೌಡೇಶ್ವರಿ ನಗರ, ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಪಾಪರೆಡ್ಡಿ ಪಾಳ್ಯ ವಿನಾಯಕ ಲೇಔಟ್, ನಾಗರಬಾವಿ ವೃತ್ತ ಮೈಸೂರು ರಸ್ತೆ, ದ್ವಾರಕಾ ನಗರ, ಹೊಸಹಳ್ಳಿ ಕಡಬಗೆರೆ, ಹೊಸ ಹಳ್ಳಿ, ಕಾಮಾಕ್ಷಿ ಪಾಳ್ಯ ಕೆಚ್‌ಬಿ ಕಾಲನಿ, ಸುಮನಹಳ್ಳಿ ವೃತ್ತ ಸುಂಕದ ಕಟ್ಟೆ ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್ ಹಾಗೂ ಕಡಬಗೆರೆಗೆ ಸಂಪರ್ಕ ಕಲ್ಪಿಸಲಿವೆ.
ಈ ವೇಳೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ವಿ. ಸೋಮಣ್ಣ ವಿರೋಧ ಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಥ್ ನೀಡಿದರು.
ಮೆಟ್ರೋ ಕಿತ್ತಳೆ ಮಾರ್ಗದ ಕಾರಿಡಾರ್ 1 ಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಮುಂದಿನ ಮೂರು ತಿಂಗಳಲ್ಲಿ ಸಂಪೂರ್ಣಗೊಳ್ಳಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.