*ಬೆಳಗಾವಿ: ಸೆ.8ರಿಂದ ರಾಷ್ಟ್ರೀಯ ಸಿವಿಲ್ ಇಂಜನಿಯರುಗಳ ಮಹಾಸಮ್ಮೇಳನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರವಿವಾರ ಹಾಗೂ ಸೋಮವಾರ (ದಿನಾಂಕ 8-10-2023 ರಿಂದ) ಎರಡು ದಿನ ಬೆಳಗಾವಿಯ ಇನ್ಸ್ಟೂಟ ಆಫ್ ಇಂಜನಿಯರ್ಸ ಆಶ್ರಯದಲ್ಲಿ ಕೆ ಎಲ್ ಇ ಸಂಸ್ಥೆಯ ಸಹಯೋಗ ದೊಂದಿಗೆ ರಾಷ್ಟ್ರೀಯ ಸಿವಿಲ್ ಇಂಜನಿಯರುಗಳ ಮಹಾಸಮ್ಮೇಳನ ಜವಾಹರಲಾಲ ಮೆಡಿಕಲ್ ಕಾಲೇಜಿನ ಕಾಂಪ್ಲೆಕ್ಸನಲ್ಲಿ ಜರುಗಲಿದೆ.
ಸಮ್ಮೇಳನದಲ್ಲಿ ನೀರಿನ ಸದ್ಬಳಕೆ ಕುರಿತು ವಿಚಾರ ಸಂಕಿರಣ ನಡೆಯಲಿದ್ದು ಅನೇಕ ಇಂಜನಿಯರಿಂಗ ತಜ್ಞರು, ವಿದ್ವಾಂಸರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಥಮ ದಿನ ಪದ್ಮಭೂಷಣ ಸುಧಾ ಮೂರ್ತಿ ಯವರು ಉದ್ಘಾಟನೆ ಮಾಡಲಿದ್ದು ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಡಾ.ಪ್ರಭಾಕರ ಕೋರೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಅಖಿಲ ಭಾರತ ಇನ್ಸ್ಟೂಟ ಆಫ್ ಇಂಜನಿಯರ್ಸ ಸಂಸ್ಥೆಯ ಸಿವಿಲ್ ವಿಭಾಗದ ಮುಖ್ಯಸ್ಥ ಎಂ ನಾಗರಾಜ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಎರಡನೆಯ ದಿನ ಸಮಾರೋಪ ಸಮಾರಂಭದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪಿ ಎಲ್ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ