Kannada NewsKarnataka News

ರಾಷ್ಟ್ರೀಯ ಫುಟ್ ಬಾಲ್ ಆಟಗಾರ ಬೆಳಗಾವಿಗೆ ಭೇಟಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಷ್ಟ್ರೀಯ ಫುಟ್ ಬಾಲ್ ಆಟಗಾರ, ಎಎಫ್ ಸಿ -ಎ ಲೈಸೆನ್ಸ್ಡ್ ಕೋಚ್ ಉಮರ್ ಮುತವಲ್ಲಿ ಮಂಗಳವಾರ ಬೆಳಗಾವಿಗೆ ಭೇಟಿ ನೀಡಿದ್ದರು.

ಉಮರ್ ಮುತವಲ್ಲಿ ಜೊತೆ ರಾಹುಲ್ ದೇಶಪಾಂಡೆ

ಪ್ರಸ್ತುತ ಸಾಲಗಾಂವ್ಕರ್ ಫುಟ್ ಬಾಲ್ ಅಕಾಡೆಮಿಯ ಕೋಟ್ ಆಗಿರುವ ಉಮರ್ ಮುತವಲ್ಲಿ ಇಲ್ಲಿಯ ಆರ್ ಡಿ’ಸ್ ಫುಟ್ ಬಾಲ್ ಅಕಾಡೆಮಿಗೆ ಭೇಟಿ ನೀಡಿದ್ದರು.

ಬೆಳಗಾವಿಯಲ್ಲಿ ಫುಟ್ ಬಾಲ್ ಕುರಿತು ಯುವಜನರಿಗಿರುವ ಆಸಕ್ತಿ ಕುರಿತು ಮಾಹಿತಿ ಪಡೆದ ಅವರು, ಆರ್ ಡಿ’ಸ್ ಅಕಾಡೆಮಿ ಕೋಚ್ ರಾಹುಲ್ ದೇಶಪಾಂಡೆ ಜೊತೆಗೆ ಚರ್ಚಿಸಿದರು. ಜೊತೆಗೆ ಅಕಾಡೆಮಿಯ ತರಬೇತಿದಾರರೊಂದಿಗೂ ಚರ್ಚಿಸಿ, ಸಲಹೆ ನೀಡಿದರು.

ಆರ್ ಡಿ’ಸ್ ಅಕಾಡೆಮಿಯ ಕಾರ್ಯಚಟುವಟಿಕೆಗಳ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿ, ಬೆಳಗಾವಿಯ ಯುವಕರು ಇದರ ಪ್ರಯೋಜನ ಪಡೆಯಬೇಕೆಂದರು.

Home add -Advt

Related Articles

Back to top button