Belagavi NewsBelgaum NewsEducationKannada NewsKarnataka NewsLatest

*ವಿದ್ಯಾರ್ಥಿಗಳೇ ನಮ್ಮ ದೇಶದ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಯ ನಿಜವಾದ ರಾಯಭಾರಿಗಳು: ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್ ಎಸ್*

ವಿಟಿಯುನಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ಯುಕ್ತಿ 2K24 ಆರಂಭ

ಪ್ರಗತಿವಾಹಿನಿ ಸುದ್ದಿ: ವಿಶ್ವೇಶ್ವರಯ್ಯತಾಂತ್ರಿಕವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯು ಯುಕ್ತಿ 2k24 ಅಡಿಯಲ್ಲಿ ರಾಷ್ಟ್ರೀಯ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವವನ್ನು ವಿತಾವಿಯ ಆವರಣದಲ್ಲಿ ಆಯೊಜಿಸಲಾಗಿದೆ.


ಯುಕ್ತಿ 2k24 ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 12ನೇ ಜನವರಿ 2024 ರಬೆಳಿಗ್ಗೆ 11 ಗಂಟೆಗೆ ವಿತಾವಿಯ ಆವರಣದಲ್ಲಿರುವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಪ್ರೇಕ್ಷಾಗೃಹದಲ್ಲಿ ನೆರವೇರಿತು. ಈ ಉತ್ಸವವನ್ನು ವಿಟಿಯು ಕುಲಪತಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ವಿದ್ಯಾಶಂಕರ್ ಎಸ್., ಅವರು ಉದ್ಘಾಟಿಸಿದರು. ಈ ಸಮಯದಲ್ಲಿ ವೇದಿಕೆ ಮೇಲೆ ವಿಟಿಯು ಕುಲಸಚಿವರು ಪ್ರೊ.ಬಿ ಈ ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಟಿಎನ್ ಶ್ರೀನಿವಾಸ, ಹಣಕಾಸು ಅಧಿಕಾರಿ ಶ್ರೀಮತಿ ಎಂಎ ಸಪ್ನಾ, ಪ್ರಾದೇಶಿಕ ನಿರ್ದೇಶಕರಾದ ಪ್ರೊ. ಎಸ್ಬಿದಂಡಗಿ, ಸ್ಟೂಡೆಂಟ್ ವೆಲ್ಫೇರ್ ಅಧಿಕಾರಿ ಪ್ರೊ .ಪ್ರಲ್ಹಾದ್ರಾಥೋದ್ ಮತ್ತು ಯುಕ್ತಿ – 2K24 ಸಂಯೋಜಕಿ ಪ್ರೊ.ದೀಪ್ತಿ ಶೆಟ್ಟಿ ಹಾಜರಿದ್ದರು.


ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರೊ.ವಿದ್ಯಾಶಂಕರ್ ಎಸ್. ಅವರು ಮಹಾನ್ಸಂತ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ಭಾರತದಾದ್ಯಂತ ಆಚರಿಸುತ್ತಿರುವ ರಾಷ್ಟ್ರೀಯ ಯುವದಿನದ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವಿಶೇಷ ದಿನವು ರಾಷ್ಟ್ರದ ಯುವಜನತೆಯ ಚೈತನ್ಯ, ಸಾಮರ್ಥ್ಯ ಮತ್ತು ಆಕಾಂಕ್ಷೆಗಳೊಂದಿಗೆ ಪ್ರತಿಧ್ವನಿಸುವ ಆಚರಣೆಯಾಗಿದೆ. ಈದಿನವು ದಾರ್ಶನಿಕ ವ್ಯಕ್ತಿಯ ಜನ್ಮವನ್ನು ಸ್ಮರಿಸುವುದು ಮಾತ್ರವಲ್ಲದೆ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಯುವಕರ ಪಾತ್ರ ಮತ್ತು ಪ್ರಾಮುಖ್ಯತೆಯನ್ನು ಗುರುತಿಸುವ ವೇದಿಕೆಯಾಗಿದೆ ಎಂದು ಹೇಳಿದರು. ಸ್ವಾಮಿ ವಿವೇಕಾನಂದರ ಬೋಧನೆಗಳು ಆಧ್ಯಾತ್ಮಿಕ ಸಾಮರಸ್ಯ, ಸಹಿಷ್ಣುತೆ ಮತ್ತು ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೈವತ್ವವನ್ನು ಗುರುತಿಸುವ ತತ್ವಗಳಾಗಿವೆ ಎಂದು ಹೇಳಿದರು.

ರಾಷ್ಟ್ರ ನಿರ್ಮಾಣದಲ್ಲಿ ಯುವಸಮುದಾಯದ ಮಹತ್ವವನ್ನು ಹೇಳುತ್ತಾ, ನಮ್ಮ ದೇಶದ ದೊಡ್ಡ ಶಕ್ತಿ ಎಂದರೆ ಅದು ಅತಿಹೆಚ್ಚು ಯುವಜನಸಂಖ್ಯೆಯನ್ನು ಹೊಂದಿದ್ದು ಈ ಯುವಶಕ್ತಿ ಯಾವುದೇ ಸಮಾಜವನ್ನು ಕ್ರಾಂತಿಕಾರಿ ರೀತಿಯಲ್ಲಿ ಪರಿವರ್ತಿಸಿ ಅಭಿವೃದ್ಧಿಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇಷ್ಟೊಂದು ಅಗಾಧವಾಗಿರುವ ಯುವಶಕ್ತಿಯನ್ನು ನಾವು ಹೇಗೆ ಮಾರ್ಗದರ್ಶನ ಮಾಡುತ್ತೇವೆ ಮತ್ತು ಬಳಸುತ್ತೇವೆ ಎಂಬುದರ ಮೇಲೆ ದೇಶದ ಭವಿಷ್ಯವು ನಿಂತಿದೆ ಎಂದು ಹೇಳಿದರು. ಆದ್ದರಿಂದ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಯುವಸಮುದಾಯವನ್ನು ಅವರ ಕೌಶಲ್ಯ ಮತ್ತು ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವ ಮೂಲಕ ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ನೀಡಿ ರಾಷ್ಟ್ರನಿರ್ಮಾಣದಲ್ಲಿ ತೊಡಗುವಂತೆ ಮಾಡಬೇಕು ಏಕೆಂದರೆ ಇಂದಿನ ವಿದ್ಯಾರ್ಥಿಗಳೇ ನಮ್ಮ ದೇಶದ ಸಂಸ್ಕೃತಿ ಮತ್ತು ಜ್ಞಾನಪರಂಪರೆಯ ನಿಜವಾದ ರಾಯಭಾರಿಗಳು ಎಂದರು.

ಈ ದಿಶೆಯಲ್ಲಿ ವಿಟಿಯು ಈ ರಾಷ್ಟ್ರೀಯ ಯುವದಿನದ ಅಂಗವಾಗಿ ತಂತ್ರಜ್ಞಾನ, ಸಂಸ್ಕೃತಿ ಮತ್ತು ಕಲೆಗಳಲ್ಲಿ ಯುವ ಮನಸ್ಸುಗಳನ್ನು ಒಂದೇ ವೇದಿಕೆಯಲ್ಲಿ ತಂದು ಕೌಶಲ್ಯ ಹಾಗೂ ಪ್ರತಿಭೆಗಳನ್ನು ತೋರ್ಪಡಿಸಲು ಯುಕ್ತಿ -2K24 ವೇದಿಕೆಯನ್ನು ಕಲ್ಪಿಸಿದೆ ಎಂದು ಹೇಳಿ ಈ ವೇದಿಕೆಯ ನಿರ್ಮಾಣದ ಹಿಂದಿರುವ ಎಲ್ಲರ ಶ್ರಮವನ್ನು ಶ್ಲಾಘಿಸಿ ಅಭಿನಂದಿಸಿದರು. ದೇಶದ ಬೇರೆ ರಾಜ್ಯಗಳ ವಿವಿಧ ಸಂಸ್ಥೆಗಳಿಂದ 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲಿ ವಿಟಿಯು ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ ಸ್ವಾಗತಿಸಿದರು. ಸಾಂಸ್ಕೃತಿಕ ಸಂಯೋಜಕಿ ಪ್ರೊ.ದೀಪ್ತಿ ಶೆಟ್ಟಿ ಯುಕ್ತಿ-2K24 ವರದಿ ಓದಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ್ ವಂದಿಸಿದರು. ಮೊದಲನೇ ದಿನ ನೃತ್ಯ, ಹಾಡು, ಪೇಪರ್ ಪ್ರಸೆಂಟೇಶನ್, ಬ್ಯಾಟಲ್ ಆಫ್ಬ್ಯಾಂಡ್ಸ್, ರಂಗೋಲಿ ಸ್ಪರ್ಧೆಗಳು ನಡೆದವು.

ಕುಲಪತಿಗಳು ಪ್ರೊ.ವಿದ್ಯಾಶಂಕರಎಸ್. ರವರ ಉಪಸ್ಥಿತಿಯಲ್ಲಿ ದಿನಾಂಕ ೧೩.೦೧.೨೦೨೪ರಂದು ಪೂರ್ವಾಹ್ನ೩.೩೦ ಕ್ಕೆ ವಿತಾವಿಯಆವರಣದಲ್ಲಿ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.


ವಿಜಯ ಪ್ರಕಾಶ ಸಂಗೀತ ಸಂಜೆ :
ಶನಿವಾರ ದಿನಾಂಕ ೧೩.೦೧.೨೦೨೪ರಂದು ಸಂಜೆ ೬.೦೦ರಿಂದದ ಪ್ರಖ್ಯಾತ ಹಿನ್ನಲೆ ಗಾಯP ವಿಜಯ ಪ್ರಕಾಶ ಅವರ ಸಂಗೀತ ಸಂಜೆ ಕಾರ್ಯಕ್ರಮ ಇರಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button