Kannada Rajyotsava – Home Add
Valmiki Jayanti Add

ಬಾಬ್ರಿ ಮಸೀದಿ ಮಹಾ ತೀರ್ಪು ಪ್ರಕಟ; ನಾಯಕರಿಗೆ ಬಿಗ್ ರಿಲೀಫ್

ಲಕ್ನೌ ಸಿಬಿಐ ವಿಶೇಷ ನ್ಯಾಯಾಲಯದಿಂದ ಪ್ರಕರಣ ನಡೆದು 28 ವರ್ಷದ ಬಳಿಕ ತೀರ್ಪು

ಬಾಬ್ರಿ ಮಸೀದಿ ಧ್ವಂಸ ಪೂರ್ವ ಯೋಜಿತ ಕೃತ್ಯ ಅಲ್ಲ

ಆರೋಪಿಗಳೆಲ್ಲ ನಿರ್ದೋಷಿಗಳು

ಪ್ರಗತಿವಾಹಿನಿ ಸುದ್ದಿ, ಲಕ್ನೌ –  ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ಹೊರಬಿದ್ದಿದ್ದು, ಇದು ಪೂರ್ವ ನಿಯೋಜಿತ ಘಟನೆ ಅಲ್ಲ, ಆಕಸ್ಮಿಕ. ಆರೋಪಿಗಳೆಲ್ಲ ನಿರ್ದೋಷಿಗಳು ಎಂದು ನ್ಯಾಯಾಲಯ ಹೇಳಿದೆ.

ಉದ್ರಿಕ್ತರಿಂದ ಘಟನೆ ಆಕಸ್ಮಿಕವಾಗಿ ನಡೆದಿದೆ. ಆರೋಪಿಗಳ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಘಟನೆ ತಡೆಯಲು ಆಡ್ವಾಣಿ ಸೋರಿ ಹಲವರು ಪ್ರಯತ್ನಿಸಿದ್ದರು ಎಂದು ಹೇಳಿದೆ.

ಸಿಬಿಐ ನೀಡಿದ್ದ ವೀಡಿಯೋವನ್ನೂ ನ್ಯಾಯಾಲಯ ಆಕ್ಷೇಪಿಸಿದ್ದು, ತಿರುಚಲಾದ ವೀಡಿಯೋ ನೀಡಲಾಗಿತ್ತು ಎಂದಿದೆ.

ಇದರಿಂದಾಗಿ ಲಾಲಕೃಷ್ಣ ಅಡ್ವಾಣಿ ಸೇರಿದಂತೆ ಮುಖಂಡರೆಲ್ಲ ತಮ್ಮ ಜೀವಮಾನದ ಅತೀ ದೊಡ್ಡ ಪ್ರಕರಣದಿಂದ ಹೊರಬಂದಿದ್ದಾರೆ.

ಪ್ರಕರಣ ನಡೆದು 28 ವರ್ಷದ ಬಳಿಕ ಲಕ್ನೌ ಸಿಬಿಐ ವಿಶೇಷ ನ್ಯಾಯಾಲಯದಿಂದ 2 ಸಾವಿರ ಪುಟಗಳ ತೀರ್ಪು ಹೊರಬಿದ್ದಿದೆ.

ನ್ಯಾಯಮೂರ್ತಿ ಎಸ್.ಕೆ.ಯಾದವ್ ತೀರ್ಪು ಪ್ರಕಟಿಸಿದರು.

 

32ರಲ್ಲಿ 26 ಆರೋಪಿಗಳು ಕೋರ್ಟ್ ಹಾಲ್ ಗೆ ಹಾಜರಾಗಿದ್ದರು. ಉಳಿದವರು ಕೊರೋನಾ, ವಯಸ್ಸು ಮತ್ತಿತರ  ಕಾರಣಗಳಿಂದ ವಿನಾಯಿತಿ ಪಡೆದಿದ್ದರು. ಲಾಲಕೃಷ್ಣ ಅಡ್ವಾಣಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಅವರು ಮನೆಯಲ್ಲೇ ಕುಳಿತು ಕೈ ಮುಗಿದುಕೊಂಡು ಟಿವಿಯಲ್ಲಿ ನ್ಯಾಯಾಲಯ ಕಲಾಪ ವೀಕ್ಷಿಸುತ್ತಿದ್ದರು.

ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನ್ಯಾಯಮೂರ್ತಿ ಎಸ್.ಕೆ.ಯಾದವ್ ಅವರಿಗೆ ಪ್ಯಾರಾಮಿಲ್ಟ್ರಿ ಪಡೆಯ ವಿಶೇಷ ಭದ್ರತೆ ಒದಗಿಸಲಾಗಿದೆ.

ವಿಶೇಷವೆಂದರೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಸಂಬಂಧ ಈಗಾಗಲೆ ಸುಪ್ರಿಂ ಕೋರ್ಟ್ ತೀರ್ಪು ನೀಡಿದ್ದು, ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.