Advertisement -Home Add

ಸುರೇಶ ಅಂಗಡಿ ಸ್ಮಾರಕ ಕೆಲಸ ಪರಿಶೀಲಿಸಿದ ಗಿರೀಶ್ ಹೊಸೂರ

ಕಾಮಗಾರಿಗೆ ಚುರುಕು ನೀಡಲು ಸೂಚನೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕೇಂದ್ರ ರೈಲ್ವೆ ಸಚಿವರಾಗಿದ್ದ ಸುರೇಶ ಅಂಗಡಿ ಸಮಾಧಿ ಸ್ಥಳ ನವದೆಹಲಿಯ ದ್ವಾರಕಾ ರುದ್ರಭೂಮಿಗೆ ಗುರುವಾರ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಹೊಸೂರ್ ಭೇಟಿ ನೀಡಿದ್ದರು.

ಬಸವ ಇಂಟರ್ ನ್ಯಾಶನಲ್ ಸೆಂಟರ್ ಟ್ರಸ್ಟ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿದ ಗಿರೀಶ್ ಹೊಸೂರ್, ಕೆಲಸವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು.

ಸಮಾಧಿ ಸ್ಥಳಕ್ಕೆ ಸೂಕ್ತ ರಕ್ಷಣೆ ಮತ್ತು ಸ್ಮಾರಕ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಅವರು ಸೂಚಿಸಿದರು.