Kannada NewsLatest

ರಾಷ್ಟ್ರೀಯ ಪ್ಯಾರಾ ಸ್ವೀಮಿಂಗ್ ಚಾಂಪಿಯನ್‍ಶಿಫ್‍: ಲಿಂಗರಾಜ ಕಾಲೇಜು ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತೀಚಿಗೆ ಬೆಂಗಳೂರಿನಲ್ಲಿ 20 ರಿಂದ 22 ಮಾಚ್ 2021 ರಂದುಜರುಗಿದ 20ನೇ ರಾಷ್ಟ್ರೀಯ ಪ್ಯಾರಾ ಸ್ವೀಮಿಂಗ್ (ಅಂಗವಿಕಲರ ಈಜು)ನಲ್ಲಿ ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆಯನ್ನುಗೈದಿದ್ದಾರೆ.

ಬಿ.ಕಾಂ.ಮೊದಲ ವರ್ಷದ ವಿದ್ಯಾರ್ಥಿನಿ ಸಿಮ್ರನ್ ಗುಂಡಲ್ಕರ್ ಹಿರಿಯ ಮಹಿಳೆಯರ ಎಸ್6 ವೈಯಕ್ತಿಕ ವಿಭಾಗದಲ್ಲಿ 3 ಚಿನ್ನದ ಪದಕಗಳನ್ನು ಪಡೆದಿದ್ದಾಳೆ.50 ಮೀ.ಫ್ರೀಸ್ಟ್ಯಾಲ್ ಹಾಗೂ 100 ಮೀ.ಫ್ರೀಸ್ಟ್ಯಾಲ್ ಮತ್ತು 50 ಮೀ.ಬ್ಯಾಕ್ ಸ್ಟ್ರೋಕ್‍ದಲ್ಲಿಚಿನ್ನದ ಪದಕವನ್ನು ಪಡೆದುಕೊಂಡಿದ್ದಾಳೆ.

Home add -Advt

ಬಿ.ಕಾಂ. ಮೊದಲ ವರ್ಷದ ಸಾಹಿಲ್‍ಜಾಧವ ಹಿರಿಯ ಪುರುಷರ ಎಸ್9 ವೈಯಕ್ತಿಕ ವಿಭಾಗದಲ್ಲಿ 100 ಮೀಟರ್ ಬಟರ್‍ಫ್ಲ್ಯಾದಲ್ಲಿ ಬೆಳ್ಳಿ ಪದಕವನ್ನು ಹಾಗೂ 200 ಮೀ.ಮಿಡ್ಲೆಯಲ್ಲಿಕಂಚಿನ ಪದಕವನ್ನು ಪಡೆದುಕೊಂಡಿದ್ದಾನೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹಾರ್ದಿಕವಾಗಿ ಅಭಿನಂದಿಸಿ ಸತ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಬಿ.ಆರ್.ಪಾಟೀಲ, ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್ ಉಪಸ್ಥಿತರಿದ್ದರು.

 

Related Articles

Back to top button