Latest

ಬೆಂಗಳೂರಿನ ಗೊರೂರು ಪಂಕಜ ಅವರಿಗೆ ‘ಸಾಧಕ ರತ್ನ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಪುರಸ್ಕಾರ

ಪ್ರಗತಿವಾಹಿನಿ ಸುದ್ದಿ, ಶಿರಸಿ:  ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಶಿರಸಿಯಲ್ಲಿ ನಡೆದ ರಾಷ್ಟ್ರೀಯ ಕವಿ ಕಾವ್ಯ ಸಂಗಮ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗೊರೂರು ಪಂಕಜ ಅವರಿಗೆ ‘ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ ಕುಮಾರ ಕನ್ಯಾಳ, ನಯನ ಫೌಂಡೇಶನ್ ಟ್ರಸ್ಟಿ ಡಾ. ತನುಶ್ರೀ ಹೆಗಡೆ, ಸಾಹಿತಿ ಡಾ. ಪಂಚಯ್ಯ ಹಿರೇಮಠ ಸಮಾಜ ಸೇವಕಿ ಶುಭಾ ವಿಷ್ಣು ಸಭಾಹಿತ, ಡಾ. ರಮೇಶ ಸಿದ್ದಪ್ಪ, ಕುಮಟಾ ಡಯಟ್ ನ ಅಧಿಕ್ಷಕಿ ಜ್ಯೋತಿ ಹೆಬ್ಬಾರ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಂಕರ ಸಿ ಪಾಟೀಲ, ನಾಗರಾಜ ತಂಬ್ರಹಳ್ಳಿ, ವಂದನಾ ಆರ್. ಕರಾಳೆ,  ನಬಿಸಾಬ ಸುಂಕದ ಅವರುಗಳಿಗೂ ಸಾಧಕರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಯಿತು

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಂಚಯ್ಯ ಹಿರೇಮಠ ಅವರು, ಪ್ರತಿಯೊಬ್ಬರೂ ಸಮಾಜ ಮುಖಿಯಾದ ಚಿಂತನೆಗಳನ್ನು ಇಟ್ಟುಕೊಂಡು ಉತ್ತಮ ಕೆಲಸಗಳನ್ನು ಮಾಡಬೇಕಾಗಿದೆ. ಒಳ್ಳೆಯ ಕೆಲಸಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಅಭಿಪ್ರಾಯಪಟ್ಟರು.

Home add -Advt

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶುಭಾ ವಿಷ್ಣು ಸಭಾಹಿತ  ಮಾತನಾಡಿ, ಸಂಸ್ಕೃತಿಕ ಸಂಘಟನೆಗಳು ಉತ್ತಮ ಕೆಲಸಗಳನ್ನು ಮಾಡುತ್ತಿವೆ ಪ್ರಶಂಸೆ ವ್ಯಕ್ತಪಡಿಸಿದರು.

ಗಂಗಾವತಿಯ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ರಮೇಶ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು ತಮ್ಮ ಕವನ ವಾಚನ ಮಾಡಿದರು.  ಮೇಘನಾ ಶಿವಾನಂದ್ ಸ್ವಾಗತಿಸಿದರು. ಸುಜಾತಾ ಹೆಗಡೆ ವಂದಿಸಿದರು.

ಹಿಂದೂ ದೇವತೆಗಳ ಚಿತ್ರವಿರುವ ಕಾಗದದಲ್ಲಿ ಕೋಳಿ ಮಾಂಸ ಕಟ್ಟಿ ಮಾರಾಟ; ಅನ್ಯಧರ್ಮೀಯನ ಬಂಧನ

Related Articles

Back to top button