ನವರಾತ್ರಿ ವಿಶೇಷ ಕಜ್ಜಾಯ, ಭಾಗ – 8

ಕ್ಯಾರೇಟ್ ಹೋಳಿಗೆ

ಕಡಲೆ ಬೆಳೆ ಹೋಳಿಗೆ, ತೆಂಗಿನ ಕಾಯೀ ಹೋಳಿಗೆ ಮೊದಲಾದ ನಾನಾ ಬಗೆಯ ಹೋಳಿಗೆಗಳನ್ನು  ಮಾಡಿಯೇ ಇರುತ್ತೀರಿ. ಹಬ್ಬ ಹರಿದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳಲ್ಲಿ ಹೋಳಿಗೆ ಇಲ್ಲದ ಊಟವೇ ಇಲ್ಲ. ಇತರ ಹೋಳಿಗೆಯ ರೀತಿಯಲ್ಲೇ  ಕ್ಯಾರೇಟ್ ಹೋಳೀಗೆಯೂ ಬಹಳ ಸ್ವಾಧಿಸ್ಟ ಮತ್ತು ಆರೋಗ್ಯಕರವಾಗಿದೆ.ಅಪರೂಪದ ಕ್ಯಾರೇಟ್ ಹೋಳಿಗೆಯನ್ನು ಮಾಡುವುದುಹೇಗೆ ಅಂತ  ಈದಿನ ತಿಳಿಯೋಣ.
ಬೇಕಾದ ಸಾಮಗ್ರಿಗಳು: 
2-3 ದೊಡ್ಡ ಕ್ಯಾರೇಟ್ (ತುರಿದರೆ  2 ಕಪ್ ಆಗಬೇಕು),ಬೆಲ್ಲ 1 ಕಪ್, ಒಂದುವರೆ ಕಪ್ ಗೋಧಿ ಹಿಟ್ಟು, ಕಾಲು ಕಪ್ ಅವಲಕ್ಕಿ, ಅರಿಶಿಣಪುಡಿ 1 ಚಮಚ , ಚಿಟಕಿ ಉಪ್ಪು, ಅರ್ಧ ಕಪ್ ಎಣ್ಣೆ.
ಮಾಡುವ ವಿಧಾನ:
ಕ್ಯಾರೇಟ ತುರಿಗೆ ಬೆಲ್ಲ ಸೇರಿಸಿ ದಪ್ಪ ತಳದ ಪಾತ್ರೆಯಲ್ಲಿ ಬೇಯಿಸಲು ಇಡಬೇಕು. ನೀರು ಸೇರಿಸ ಬಾರದು. ಈ ಹೂರಣಕ್ಕೆ ಅವಲಕ್ಕಿ ಸೇರಿಸಿ ಕಾಯಿಸಬೇಕು.(ದಪ್ಪ ಅವಲಕ್ಕಿ ಆದರೆ  ತೊಳೆದು ಹಾಕಬೇಕು)ಸ್ವಲ್ಪ ಗಟ್ಟಿ ಆದನಂತರ ಹೂರಣವನ್ನು ರುಬ್ಬಬೇಕು .ನಂತರ ಉಂಡೆ ಮಾಡಿ ಇಡಬೇಕು.
ಗೋಧಿ ಹಿಟ್ಟಿಗೆ ಚಿಟಕಿ ಉಪ್ಪು ಅರಿಶಿಣ ಹಾಕಿ ನೀರಿನಿಂದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ 1ಗಂಟೆ ನೆನೆಯಲು ಬಿಡಬೇಕು.1ಗಂಟೆ ಬಳಿಕ ಎಣ್ಣೆ ಹಾಕಿ ನಾದಬೇಕು . ( ಹಿಟ್ಟು ನೆನೆಯಲು ಬಿಟ್ಟು ನಂತರ ಎಣ್ಣೆ ಹಾಕಿ ನಾದುವುದರಿಂದ  ಹೋಳಿಗೆ ಮೃದುವಿಗಿ ಬರುತ್ತದೆ ಮತ್ತು ಲಟ್ಟಿಸುವಾಗ  ಹರಿಯುವುದಿಲ್ಲ.)
ಹೂರಣದ ಉಂಡೆಯ ಅರ್ಧದಸ್ಟು ಗೋಧಿಹಿಟ್ಟಿನ ಮಿಶ್ರಣ(ಕಣಕ)ತೆಗೆದುಕೊಂಡು ಹೂರಣವನ್ನು ಇದರಲ್ಲಿ ತುಂಬಿ ಬಾಳೆ  ಎಲೆ ಅಥವಾ ಹೋಳಿಗೆ ಪೇಪರಿನಲ್ಲಿ ಲಟ್ಟಿಸಿ ಬೇಯಿಸಬೇಕು. ನಾಲ್ಕು ದಿನ ಇಟ್ಟು ಸಹ ತಿನ್ನಬಹುದು.ತುಪ್ಪ ಮತ್ತು ಸಕ್ಕರೆ ಪಾಕ ಹಾಕಿ ತಿಂದರೆ ತುಂಬಾನೆ ರುಚಿಯಾಗಿರುತ್ತೆ.
(ಗೋಧಿ ಹಿಟ್ಟಿನ ಬದಲು ಮೈದಾ ಹಿಟ್ಟನ್ನು ಬಳಸ ಬಹುದು. ಮೈದಾ ಆರೋಗ್ಯಕ್ಕೆ ಅಸ್ಟೊಂದು ಒಳ್ಳೆಯದಲ್ಲ ಅದಕ್ಕೆ ನಾನು ಗೋಧಿ ಹಿಟ್ಟನ್ನೇ  ಬಳಸುವುದು)
-ಸಹನಾ ಭಟ್, ಸಹನಾಸ್ ಕಿಚನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button