Latest

ನವರಾತ್ರಿ ವಿಶೇಷ ಕಜ್ಜಾಯ, ಭಾಗ – 9

ಸಾಬಕ್ಕಿ (ಶಾಬಕ್ಕಿ)ಪಾಯಸ

ಸಾಬಕ್ಕಿ  ಪಾಯಸ ಚನ್ನಾಗಿ ಆಗಲ್ಲಾ ಕರಗಿ ಹೊಗುತ್ತೆ ಮುದ್ದೆ ಆಗುತ್ತೆ ಎನ್ನುವವರು ಈ ರೀತಿ ಒಂದು ಸಲ ಮಾಡಿ. ನೊಡಲಿಕ್ಕೂ ತುಂಬಾನೆ ಡಿಪರೆಂಟಾಗಿರುತ್ತೆ . ರುಚಿಯು ಸಹ ತುಂಬಾನೇ ಚನ್ನಾಗಿ ಇರುತ್ತೆ.
ಬೇಕಾಗುವ  ಸಾಮಗ್ರಿ:
ಸಾಬಕ್ಕಿ 1 ಬಟ್ಟಲು, ಹಾಲು ಅರ್ಧ ಲೀಟರ್, ಚಿಕ್ಕ ಕ್ಯಾರೆಟ್ 1, ತುಪ್ಪ 2ಚಮಚ,ಸಕ್ಕರೆ ಒಂದು ವರೆ ಬಟ್ಟಲು, ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೊಡಂಬಿ ಬಾದಾಮ್, ಚಿಟಕಿ ಉಪ್ಪು.
ಮಾಡುವ ವಿಧಾನ:
ಸಾಬಕ್ಕಿಯನ್ನು ನೀರುಹಾಕಿ 1ತಾಸು ನೆನೆಸಿಡ ಬೇಕು. ನೆನೆದ ಸಾಬಕ್ಕಿಗೆ  ಮುಳುಗುವಸ್ಟು ನೀರು ಹಾಕಿ ಕುಕ್ಕರಿನಲ್ಲಿ 4-5 ಸೀಟಿ ಹಾಕಿಸ ಬೇಕು. ಕ್ಯಾರೇಟ್  ಸಿಪ್ಪೆ ತೆಗೆದು ತುರಿದು , ಸ್ವಲ್ಪ ತುಪ್ಪಹಾಕಿ ಹುರಿಯ ಬೇಕು. ಹಾಲನ್ನಾ ಮೊದಲೇ ಕಾಯಿಸಿಟ್ಟು ಕೊಳ್ಳ ಬೇಕು. ಹಾಲಿಗೆ ಸಕ್ಕರೆ ಮತ್ತು ಬೇಯಿಸಿಟ್ಟ ಸಾಬಕ್ಕಿ ಸೇರಿಸಿ ಗ್ಯಾಸಿನ ಮೇಲೆ ಸಣ್ಣ ಉರಿಯಲ್ಲಿ ಇಟ್ಟು ಕೈ ಆಡಿಸುತ್ತ ಇರಬೇಕು. (ಸಬಕ್ಕಿ ಬೇಗನೆ ದಪ್ಪವಾಗಿ ತಳ ಸೀದಿ ಹೋಗುತ್ತದೆ) ತುಂಬಾ ದಪ್ಪವೆನಿಸಿದರೆ  ಹಾಲು ಅಥವಾ ನೀರನ್ನಾ ಸೇರಿಸ ಬಹುದು.ತುಪ್ಪದಲ್ಲಿ ಹುರಿದ ಕ್ಯಾರೇಟ್ ತುರಿ,ದ್ರಾಕ್ಷಿ, ಗೋಡಂಬಿ,ಬಾದಾಮ್ ಗಳನ್ನು ಹಾಕಿ  ಒಂದು ಕುದಿ ಕುದಿಸ ಬೇಕು .ಕ್ಯಾರೆಟ್ ತುರಿ ಪಾಯಸದಲ್ಲಿ ಸೇರಿ ಕೇಸರಿ ದಳದ ರೀತಿಕಾಣುತ್ತೆ. ಕೊನೆಯದಾಗಿ ಚಿಟಕಿ ಉಪ್ಪನ್ನಾ ಸೇರಿಸ ಬೇಕು.ಪಾಯಸ ಸವಿಯಲು ತಯಾರಾಗಿದೆ.
(ಸೂಚನೆ: ಸಾಬಕ್ಕಿ  ಬೇಗನೆ ದಪ್ಪವಾಗುವದರಿಂದ ಹಾಲು ಮತ್ತು ಸಕ್ಕರೆಯನ್ನು ಸೇರಿಸಬಹುದು. ಈ ಪಾಯಸ ಪ್ರಿಜ್ ನಲ್ಲಿಟ್ಟು ತಣ್ಣಗಾದ ಮೇಲೆ ತಿನ್ನಲು ಚೆನ್ನಾಗಿರುತ್ತೆ)
-ಸಹನಾ ಭಟ್, ಸಹನಾಸ್ ಕಿಚನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button