ಪ್ರಗತಿವಾಹಿನಿ ಸುದ್ದಿ : ರಾಜ್ಯದ ಕೊನೆಯ ನಕ್ಷಲ್ ಉಡುಪಿ ಜಿಲ್ಲೆಯ ತೊಂಬಟ್ಟುವಿನ ಲಕ್ಷ್ಮಿ ಎಂಬುವವರು ಇಂದು ಡಿಸಿ ಮುಂದೆ ಶರಣಾಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಅಮವಾಸ್ಯೆ ಬೈಲಿನ ತೊಂಬಟ್ಟು ಗ್ರಾಮದ ಲಕ್ಷ್ಮೀ ಅವರು 2006ರ ಮಾರ್ಚ್.6 ರಿಂದ ನಾಪತ್ತೆಯಾಗಿದ್ದರು. ಇದಾದ ಬಳಿಕ ಆಂಧ್ರದಲ್ಲಿ ನಕ್ಸಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅಷ್ಟೇ ಅಲ್ಲದೆ ಮಾಜಿ ನಕ್ಸಲ್ ಸಂಜೀವ್ ಅವರನ್ನು ಮದುವೆಯಾಗಿದ್ದರು. ಇದಾದ ಬಳಿಕ ನಕ್ಸಲ್ ಯಿಂದ ದೂರವಾಗಿ ಆಂಧ್ರದಲ್ಲೇ ಸಂಸಾರ ಜೀವನ ನಡೆಸುತ್ತಿದ್ದರು. ಜೊತೆಗೆ ಪತಿ ಜೊತೆ ಮುಖ್ಯವಾಹಿನಿಗೆ ಬಂದು ಆಂಧ್ರ ಸರ್ಕಾರದ ಮುಂದೆ ಶರಣಾಗಿದ್ದರು.
ಇದೀಗ ಕರ್ನಾಟಕದ ಉಡುಪಿ ಜಿಲ್ಲೆಯ ಅಮವಾಸ್ಯೆ ಬೈಲಿನ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರು ಇಂದು ಉಡುಪಿ ಡಿಸಿ ಮುಂದೆ ಶರಣಾಗತಿಯಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ