ಪ್ರಗತಿವಾಹಿನಿ ಸುದ್ದಿ; ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಎ ನಡೆಸುತ್ತಿದ್ದ ತನಿಖಾಧಿಕಾರಿ ಸಮೀರ್ ವಾಂಖಡೆ ವಿರುದ್ಧವೇ ತನಿಖೆಗೆ ಎನ್ ಸಿಬಿ ಆದೇಶ ನೀಡಿದೆ.
25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖಡೆ ವಿರುದ್ಧ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರ್ ವಿಜಿಲೆನ್ಸ್ ತನಿಖೆಗೆ ಆದೇಶಿಸಿದೆ. ಎನ್ ಸಿಬಿ ಪ್ರಧಾನ ಕಚೇರಿಯಲ್ಲಿ ಎನ್ ಸಿಬಿ ಉಪ ನಿರ್ದೇಶಕ ಜ್ನಾನೇಶ್ವರ್ ಸಿಂಗ್ ಸಮೀರ್ ವಾಂಖಡೆ ವಿಚಾರಣೆ ನಡೆಸಲಿದ್ದಾರೆ.
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಎನ್ ಸಿಬಿ ಅಧಿಕಾರಿಗಳು ಆರ್ನನ್ ಖಾನ್ ನನ್ನು ಕಸ್ಟಡಿಯಲ್ಲಿಟ್ತುಕೊಂಡಿದ್ದ ವೇಳೆ ವಿಡಿಯೋ ಒಂದು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಕೆಲ ಖಾಲಿ ಪೇಪರ್ ಗಳು ಇದ್ದವು. ವಿಡಿಯೋದಲ್ಲಿದ್ದ ಪೇಪರ್ ನಲ್ಲಿ ಎನ್ ಸಿಬಿ ಅಧಿಕಾರಿಗಳು ಆರ್ಯನ್ ನಿಂದ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರ್ಯನ್ ಬಾಡಿ ಗಾರ್ಡ್ ಕೆ.ಪಿ ಗೋಸವಿ ಆರೋಪಿಸಿದ್ದರು ಅಲ್ಲದೇ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಕೇಸ್ ಮುಚ್ಚಿ ಹಾಕಲು 25 ಕೋಟಿ ಡೀಲ್ ಮಾಡಿಕೊಂಡಿದ್ದರು. ಅದರಲ್ಲಿ 8 ಕೋಟಿ ಸಮೀರ್ ವಾಖಂಡೆಗೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಹಣ ಕಡಿಮೆ ಆಗಿದೆ ಎಂಬ ಕಾರಣಕ್ಕೆ ಆರ್ಯನ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಇದನ್ನು ನಾನೇ ಕಣ್ಣಾರೆ ಕಂಡಿದ್ದೇನೆ ಎಂದು ಗೋಸವಿ ಆರೋಪಿಸಿದ್ದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ